ಪಿರಿಯಾಪಟ್ಟಣ: ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಖದೀಮರು 10 ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿದ್ದು, ಟಿಬೆಟಿಯನ್ ರೈತರೊಬ್ಬರು ಕಂಗಾಲಾಗಿದ್ದಾರೆ.
ಬೈಲಕುಪ್ಪೆಯ ತಿರುಮಲಾಪುರ ಗ್ರಾಮದ ಮುಖ್ಯರಸ್ತೆಯ ಅಂಚಿನಲ್ಲಿರುವ ಟಿಬೆಟಿಯನ್ ರೈತರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ.
ಸುಮಾರು 2 ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಅಡಿಕೆ ಬೆಳೆಯಲಾಗಿತ್ತು. ಅಡಿಕೆ ಕೊಯ್ಲು ಮಾಡಿ ತೋಟದಲ್ಲೇ ಗುಡ್ಡೆ ಹಾಕಲಾಗಿತ್ತು.
ಎರಡು ಮೂರು ವಾರದಲ್ಲಿ ಹಸಿ ಅಡಿಕೆಯನ್ನು ಮಾರಾಟ ಮಾಡಲು ರೈತ ಸಿದ್ಧತೆ ನಡೆಸಿದ್ದರು. ಆದರೆ ಇದನ್ನು ಗಮನಿಸಿದ ಖದೀಮರು ಒಂದೇ ರಾತ್ರಿಯಲ್ಲಿ ಪ್ಲಾನ್ ಮಾಡಿ ಅಡಿಕೆಯನ್ನೆಲ್ಲಾ ಕದ್ದು ಪರಾರಿಯಾಗಿದ್ದಾರೆ.
ಕಷ್ಟಪಟ್ಟು ಬೆಳೆದ ಬೆಳೆ ಕೈತಪ್ಪಿದ್ದರಿಂದ ರೈತ ಈಗ ಕಂಗಾಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.





