Mysore
20
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಲ್ತುಳಿತಕ್ಕೆ ಜನರ ಅಶಿಸ್ತು ಕಾರಣ : ಗಣಪತಿ ಸಚ್ಚಿದಾನಂದ ಸ್ವಾಮೀಜಿ

sacchidananda swamy

ಮೈಸೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವನ್ನು ದೂಷಿಸಬಾರದು. ಕಾಲ್ತುಳಿತಕ್ಕೆ ಕಾರಣ ಜನರ ಅಶಿಸ್ತು ಹಾಗೂ ಬೇಜಾವಬ್ದಾರಿತನ ಎಂದು ಅವಧೂತ ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರಿಕೆಟ್ ಆಟಗಾರರನ್ನು ಹತ್ತಿರದಿಂದ ನೋಡುವ ಆಸೆಯಿಂದ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆಕಾಶ ನೋಡಲು ನೂಕು ನುಗ್ಗಲು ಯಾಕೆ?
ಟಿ.ವಿ. ಗಳಲ್ಲಿ ಬಹಳ ಹತ್ತಿರದಿಂದ ತೋರಿಸುತ್ತಾರೆ ನೋಡಿದರೆ ಆಯಿತು. ನೀರು, ಉಪ್ಪನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕರೂ ಜನ ಓಡಿ ಹೋಗುತ್ತಾರೆ. ಜನರಿಗೆ ತಾಳ್ಮೆ, ಶಿಸ್ತು ಮುಖ್ಯ ಎಂದರು.

ತಿರುಪತಿ ಹಾಗೂ ಕುಂಭಮೇಳದಲ್ಲೂ ಸಹ ಇಂತಹದ್ದೇ ಅವಘಢವಾಯಿತು. ಹೀಗಾಗಿ ನಾವು ನಿಂದಿಸಬೇಕಾದದ್ದು ಸರ್ಕಾರವನ್ನಲ್ಲ. ಜನರು ಮೊದಲು ಎಚ್ಚೆತ್ತುಕೊಳ್ಳಬೇಕು. ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಉತ್ತಮ ನಾಗರಿಕರಾಗಿ ವರ್ತಿಸಬೇಕು. ಓದಿದಷ್ಟು ಜನರ ಬುದ್ಧಿ ಕೆಳಮಟ್ಟಕ್ಕೆ ಹೋಗುತ್ತಿದೆ. ಗುಡ್ಡ ಕುಸಿಯುತ್ತದೆ ಅಂತ ತಿಳಿದಿದ್ದರೂ ಸಹ ಅದರ ಕೆಳಗೆ ಮನೆ ಕಟ್ಟುತ್ತಾರೆ. ಹೀಗಾಗಿ ಜನ ಮೊದಲು ಬದಲಾಗಬೇಕು ಎಂದು ಹೇಳಿದರು.

10 ಲಕ್ಷ, 5 ಲಕ್ಷ ಪರಿಹಾರ ನೀಡಿದರೆ ಅಲ್ಲಿ ಹೋಗಿರುವ ಜೀವ ವಾಪಸ್ ಬರುಲ್ಲಾ. ಮೊದಲು ಜನರ ಮನ ಪರಿವರ್ತನೆ ಆಗಬೇಕಿದೆ ಎಂದು ನುಡಿದರು.

Tags:
error: Content is protected !!