ಮೈಸೂರು ; ದಸರಾ ಮಹೋತ್ಸವ ಮುಗಿದ ಬೆನ್ನಲ್ಲೇ ನಾಡದೇವಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಜನರು ಮುಗಿಬಿದ್ದಿದ್ದಾರೆ. ಜಂಬೂ ಸವಾರಿ ನೋಡಲು ಮೈಸೂರಿಗೆ ಆಗಮಿಸಿದ್ದ ಜನರು ಇಂದು ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪ್ರವೇಶ, ಸಾಮಾನ್ಯ ಪ್ರವೇಶಗಳಲ್ಲಿ ಕಿ.ಮೀ.ಗಟ್ಟಲೇ ಕ್ಯೂ ನಿಂತಿದ್ದು, ಇಂದು, ನಾಳೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ದಸರಾ ದೀಪಾಲಂಕಾರ ವೀಕ್ಷಣೆಗೆ ಇನ್ನೂ 10 ದಿನಗಳ ಅವಕಾಶ ಇದ್ದು, ಭಾನುವಾರ ಬೆಟ್ಟದಲ್ಲಿ ತೇರು ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.





