Mysore
27
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದಿರು ಘಟನೆ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ರಾಂಪುರ ಗ್ರಾಮದ ಗೌರಮ್ಮ ಹಾಗೂ ಭಾಸ್ಕರ್‌ ಎಂಬುವವರು ಮನೆ ನಿವೇಶನವನ್ನು ಇ-ಸ್ವತ್ತು ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿಗೆ ಇಬ್ಬರು ಅರ್ಜಿದಾರರು ಅರ್ಜಿ ಸಲ್ಲಿಸುವಾಗ ತಮ್ಮ ತಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲೆ ನೀಡಿದ್ದರೂ ಪಿಡಿಒ ಕುಳ್ಳೇಗೌಡ ಇ-ಸ್ವತ್ತು ಮಾಡಿ ಕೊಟ್ಟಿರಲಿಲ್ಲ.

ಹೀಗಾಗಿ, ಅರ್ಜಿದಾರರು ಪಿಡಿಒಗೆ ಕರೆ ಮಾಡಿ ಇ-ಸ್ವತ್ತು ಮಾಡಿಲ್ಲ ಏಕೆ ಎಂದು ಕೇಳಿದಾಗ ಪಿಡಿಒ ಹಣಕ್ಕೆ ಒತ್ತಾಯ ಮಾಡಿದ್ದರು.

Tags:
error: Content is protected !!