Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪರಿಷತ್ ಚುನಾವಣೆ: ನಿಷೇಧಾಜ್ಞೆ ಜಾರಿ

ಮೈಸೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬoಧ ಜೂ.03 ರಂದು ಮತದಾನ ಕಾರ್ಯ ಮತ್ತು ಜೂ.06 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾನ ಹಾಗೂ ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಲು ಹಾಗೂ ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜೂ.03 ರ ಬೆಳಿಗ್ಗೆ 05 ಗಂಟೆಯಿoದ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಜೂ.06 ಮತ ಎಣಿಕೆ ದಿನದಂದು ಬೆಳಿಗೆ 06 ಗಂಟೆಯಿoದ ಜೂ.07 ರ ಬೆಳಿಗ್ಗೆ 05 ಗಂಟೆಯವರೆಗೆ ಕಲಂ 144ರ ರೀತ್ಯ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.

ಈ ದಿನಗಂಳದು ಚುನಾಯಿತ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಸದ ಮನೆಗಳ ಮುಂದೆ ಪಟಾಕಿಗಳನ್ನು ಸಿಡಿಸುವುದು, ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಐದು ಮಂದಿಗಿoತ ಹೆಚ್ಚು ಜನ ಗುಂಪುಗೂಡುವುದು, ಸಭೆ ಸಮಾರಂಭಗಳನ್ನು ನಡೆಸುವುದು, ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಫೋಟಕ ವಸ್ತು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಒಯ್ಯುವುದು, ಯಾವುದೇ ಮೆರವಣಿಗೆ ನಡೆಸುವುದು ಹಾಗೂ ಪ್ರಚೋದನಾಕಾರಿ ಭಾಷಣ ಮಾಡುವುದು, ಧ್ವನಿವರ್ಧಕ, ಡಿ.ಜೆ. ಉಪಯೋಗಿಸುವುದು ಮತ್ತು ಬೈಕ್ ರ್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವು ಮದುವೆ ಸಮಾರಂಭಗಳಿಗೆ, ಧಾರ್ಮಿಕ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ-ಕಾಲೇಜು ಪರೀಕ್ಷೆಗೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: