Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪಿಡಿಒಗಳಿಗೆ ಚೆಕ್‌ಪೋಸ್ಟ್‌ ಹೊಣೆ ಇಲ್ಲ

ಮೈಸೂರು: ಲೋಕಸಭಾ ಚುನಾವಣೆ ಹಾಗೂ ಬರಗಾಲದ ಕರ್ತವ್ಯವನ್ನು ಜೊತೆಯಾಗಿ ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಜಿಲ್ಲಾಡಳಿತವು ಜಿಲ್ಲಾ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳಿಗೆ ತರಬೇತಿ ನೀಡಲು ನಿರ್ಧರಿಸಿಕೊಂಡಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
 
ಚುನಾವಣಾ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಚುನಾವಣಾ ಚೆಕ್ಪೋಸ್ಟ್ , ಸೆಕ್ಟರ್ ಅಧಿಕಾರಿಗಳಿಗೆ ಕರ್ತವ್ಯದಿಂದ ವಿನಾಯಿತಿ ನೀಡಿದೆ. ರಾಜ್ಯದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು, ಹೀಗೆ ಪ್ರತ್ಯೇಕ ತರಬೇತಿ ನೀಡಿದ ಉದಾಹರಣೆಗಳಿಲ್ಲ ಎಂದರು.
 
ಅಭಿವೃದ್ದಿಅಧಿಕಾರಿಗಳನ್ನು ಚೆಕ್ಪೋಸ್ಟ್ಗಳಿಗೆ ನಿಯೋಜಿಸಿದರೆ, ಹಗಲು-ರಾತ್ರಿ ಪಾಳಿಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸ ಬೇಕಾಗುತ್ತದೆ. ಆಗ ದೈನಂದಿನ ಆಡಳಿತಾತ್ಮಕ ಕೆಲಸಗಳಿಗೆ,  ಕುಡಿಯುವ ನೀರು ಪೂರೈಕೆ ಸೇರಿದಂತೆ ಮತ್ತು ಬರಗಾಲ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಅಧಿಕಾರಿಗಳನ್ನು ಸೆಕ್ಟರ್ ಅಧಿಕಾರಿಗಳ ತಂಡಕ್ಕೆ ಮತ್ತು ಚೆಕ್ಪೋಸ್ಟ್ಗಳಿಗೆ ನಿಯೋಜಿಸದಿರಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಹೇಳಿದರು.
 
ಅಧಿಕಾರಿಗಳು ಕಳೆದ ಚುನಾವಣೆ ಸಂದರ್ಭದಲ್ಲಿ ಚೆಕ್ಪೋಸ್ಟ್ಗಳನ್ನು ನಿಯೋಜಿಸುವುದರಿಂದಾಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದರು ಎಂದು ಮೂಲಗಳಿಂದ ತಿಳಿದಿದ್ದು, ಮತಗಟ್ಟೆಗಳಿಗೆ ವಿದ್ಯುತ್, ರ್ಯಾಂಪ್ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವುದಲ್ಲದೆ, ಮತದಾನ ಪ್ರಮಾಣ ಅಧಿಕವಾಗಿಸುವಲ್ಲಿ ಶ್ರಮಿಸುವ ನೀತಿ ಸಂಹಿತೆ ಪಾಲನೆಯ ಕರ್ತವ್ಯ ಮತ್ತು ಸ್ವೀಪ್ ಚಟುವಟಿಕೆಗಳನ್ನು ನಿಭಾಯಿಸಲಿದ್ದಾರೆ. ಈ ಮೂರು ಚಟುವಟಿಕೆಗಳ ನಿರ್ವಹಣೆ ವಿಚಾರವಾಗಿ ಈ ಅಧಿಕಾರಿಗಳು ಅವರ ಪಂಚಾಯಿತಿಯ ಕಾರ್ಯವ್ಯಾಪ್ತಿಯಲ್ಲಯೇ ನಿರಂತರವಾಗಿ ಸಂಚರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಅವರು ಸ್ಥಳೀಯ ಸಾರ್ಜನಿಕರ ಸಂಪರ್ಕಕ್ಕೂ ಸುಲಭವಾಗಿ ಸಿಗುವಂತಾಗುತ್ತದೆ ಎಂದು ಜಿಲ್ಲಾಡಳಿತದ ದೃಷ್ಟಿಕೋನವಾಗಿದೆ ಎಂದು ಮಾಹಿತಿ ನೀಡಿದರು.
 
ಚುನಾವಣೆಯ ಕರ್ತವ್ಯಗಳನ್ನು ಕುರಿತು ಆಯೋಗ ಆದೇಶಗಳನ್ನು ರವಾನಿಸುವ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, ಕರ್ತವ್ಯ ನಿರ್ವಹಣೆ ಹೇಗೆ ಎಂಬ ಬಗ್ಗೆ ಸ್ಪಷ್ಟ ಸೂಚನೆ ಹಾಗೂ  ಮಾರ್ಗದರ್ಶನ ನೀಡುವ ಪ್ರಯತ್ನಗಳು ಬೇಕೆಂಬ ಕಾರಣಕ್ಕೆ ತರಬೇತಿಯನ್ನು ಆಯೋಜಿಸಲಾಗಿದೆ. 
 
ಚುನಾವಣೆ ಸಿಬ್ಬಂದಿಗೆ ಮಾದರಿ ನೀತಿ ಸಂಹಿತೆ ಪಾಲನೆ , ಚುನಾವನಾ ವೆಚ್ಚ ಪರಿಶೀಲನೆ, ವಿಡಿಯೋ ವೀಕ್ಷಣೆ ತಂಡ, ಫ್ಲೆಯಿಂಗ್ ಸ್ಕ್ವಾಡ್, ಸೆಕ್ಟರ್ ಮತ್ತು ವಿವಿಧ ರೀತಿಯ ತರಬೇತಿಗಳನ್ನು ಅಧಿಕಾರಿಗಳ ತಂಡಗಳಿಗೆ ನೀಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮವೂ ಭರದಿಂದ ಸಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ತಿಳಿಸಿದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ