Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಉಕ್ಕಿ ಹರಿದ ಕಪಿಲೆ: ಪರಶುರಾಮ ದೇವಾಲಯ ಮುಳುಗಡೆ…

ಮೈಸೂರು/ನಂಜನಗೂಡು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ದಿನವಿಡಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಜಲಾಶಾಯಗಳಿಗೆ ಜೀವಕಳೆ ಬಂದಿದೆ.

ಎಚ್‌ ಡಿ ತಾಲೂಕಿನ ಕಬಿನಿ ಜಲಾಶಯವು ಭರ್ತಿಯಾಗಿದೆ. ಹೀಗಾಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬೀಡಲಾಗಿದೆ. ಈ ಹಿನ್ನೆಲೆ ನಂಜನಗೂಡಿನ ಕಪಿಲೆ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕಪಿಲಾ ನದಿ ದಡದಲ್ಲಿರುವ ಪರಶುರಾಮ ದೇಗುಲ ಅರ್ಧ ಮುಳುಗಡೆಯಾಗಿದ್ದು, ದೇವಾಲಯಕ್ಕೆ ಹೋಗುವ ದಾರಿ ಸಂಪೂರ್ಣ ಜಲಾವೃತವಾಗಿದೆ. ಆಗಾಗಿ ದೇವಾಲಯಕ್ಕೆ ಬೀಗ ಹಾಕಲಾಗಿದೆ.

ಕಪಿಲ ನದಿ ದಡದ ನಿವಾಸಿಗಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ.

 

 

Tags:
error: Content is protected !!