ಮೈಸೂರು : ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ನದಿ ಜಲಾಪಾತಗಳೆಲ್ಲವೂ ಕೂಡ ತುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಕೆ.ಆರ್ ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತ ಕೂಡ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಅಲ್ಲದೆ ಜಲಪಾತ ರುದ್ರರಮನೀಯ ದೃಶ್ಯವನ್ನು ಕಂಡು ಪ್ರವಾಸಿಗರು ಕೂಡ ಫುಲ್ ಖುಷ್ ಆಗಿದ್ದಾರೆ. ಈ ಜಲಪಾತದ ಸೌಂದರ್ಯವನ್ನು ನೋಡುತ್ತಿದ್ದರೆ ಕಣ್ಣಿಗೆ ಒಂದು ರೀತಿ ಹಬ್ಬವನ್ನು ಉಂಟುಮಾಡುತ್ತಿದೆ.





