Mysore
22
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕೆ.ಆರ್‌ ನಗರ | ಮದ್ಯದಂಗಡಿ ತೆರೆಯಲು ವಿರೋಧ, ಮಹಿಳೆಯರ ಪ್ರತಿಭಟನೆ

opposition to open liquor store

ಕೆ.ಆರ್ ನಗರ : ತಾಲೂಕಿನ ಗುಮ್ಮನಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮದ್ಯದಂಗಡಿ (ಎಂಎಸ್‌ಐಎಲ್‌) ತೆರೆಯಲು ಬಿಡುವುದಿಲ್ಲ ಎಂದು ಮಹಿಳಾ ಸಂಘಗಳ ಸದಸ್ಯರು ಮತ್ತು ಗ್ರಾಮದ ಯಜಮಾನರು ಮಧ್ಯದ ಅಂಗಡಿಯ ನಾಮಫಲಕವನ್ನು ಕಿತ್ತು ಸುಡುವ ಮೂಲಕ ಪ್ರತಿಭಟಿಸಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆಯರು, ಸಾಲಿಗ್ರಾಮ ತಾಲೂಕಿನ ಗುಮ್ಮನಲ್ಲಿ ಗ್ರಾಮದಲ್ಲಿ ನೆನ್ನೆ ರಾತ್ರಿ ಸರ್ಕಾರಿ ಸೌಮ್ಯದ ಮಧ್ಯದ ( ಎಂ ಎಸ್ ಐ ಎಲ್ ) ಅಂಗಡಿಯ ಸನ್ನದ್ದುದಾರ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಬಾಗಿಲು ಅಂಗಡಿಯ ತೆರೆಯಲು ಬಂದಾಗ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ರಾತ್ರಿ ಪೂರ್ಣ ಸ್ಥಳದಲ್ಲಿ ಮುಕ್ಕಮ್ ಹೊಡಿ ಕಾದಿದ್ದಲ್ಲದೆ ಬೆಳಿಗ್ಗೆಯಿಂದಲೇ ಗ್ರಾಮದ ಮಹಿಳಾ ಸಂಘಗಳು ಮತ್ತು ಗ್ರಾಮಸ್ಥರು ನೂರಾರು ಜನ ಅಂಗಡಿಯ ಮುಂಭಾಗ ಸಭೆ ಸೇರಿ ಎಲ್ಲರೂ ಒಂದಾಗಿ ನಮ್ಮ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮಧ್ಯದ ಅಂಗಡಿಯನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟಿಸಿದರು.

ಬಳಿಕ ಮಾತನಾಡಿದ ಮಹಿಳಾ ಸಂಘದ ಸದಸ್ಯರು, ಸರ್ಕಾರ ಮಹಿಳೆಯರಿಗಾಗಿ ಗ್ರಾಮಾಂತರ ಪ್ರದೇಶದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನಪರ ಕೆಲಸಗಳನ್ನು ಮಾಡುತ್ತಿದ್ದರು ನಮ್ಮ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಅನಕ್ಷರಸ್ಥರು ಮತ್ತು ಬಡವರು ಹೆಚ್ಚು ವಾಸವಿರುವ ನಮ್ಮ ಗ್ರಾಮದಲ್ಲಿ ಉದ್ಯೋಗಕ್ಕಾಗಿ ಮತ್ತು ಕೂಲಿಗಾಗಿ ಹೊರ ಗ್ರಾಮಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಕೂಲಿ ನಾಲಿ ಮಾಡಿ ಸಂಪಾದನೆ ಮಾಡಿದ ಹಣವನ್ನು ಈ ಮಧ್ಯದ ಅಂಗಡಿಗೆ ಹಾಕಿದರೆ ನಮ್ಮ ಗತಿಯೇನು? ಆದ್ದರಿಂದ ನಮ್ಮ ಗ್ರಾಮಕ್ಕೆ ಮಧ್ಯದ ಅಂಗಡಿ ಯಾವುದೇ ಕಾರಣಕ್ಕೂ ಬೇಡ ಎಂದು ಇಲಾಖೆ ಮತ್ತು ಸರ್ಕಾರವನ್ನು ಒತ್ತಾಯಿಸಿದರು.

Tags:
error: Content is protected !!