ಮೈಸೂರು: ಇಲ್ಲಿನ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯ ೨ನೇ ಕ್ರಾಸ್‌ನ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ೭೫ನೇ ವರ್ಷದ ಜಾತ್ರಾ ಮಹೋತ್ಸವದ ಹಂಗವಾಗಿ ಸೋಮವಾರ ರಾತ್ರಿ ಸಿದ್ದಪ್ಪಾಜಿ ದೇವರ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ಹೂ ಹೊಂಬಾಳೆ ಅಲಂಕೃತವಾದ ಬಸವ ಕಳಸ ಹೊತ್ತ ಮಕ್ಕಳೊಂದಿಗೆ ಹೆಜ್ಜೆ ಹಾಕಿತು. ತಮಟೆ ಮತ್ತು ಹೂ ದೀಪಾಲಂಕಾರಗಳಿಂದ ಕೂಡಿದ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಬೆಳಿಗ್ಗೆಯಿಂದಲೂ ಗಣಪತಿ ಪೂಜೆ, ಪುಣ್ಯಾಹಃ, ಕಲಾ ಹೋಮ, ಪೂರ್ಣಾಹುತಿ ಪೂಜಾ ವಿಧಿವಿಧಾನಗಳು ನಡೆದವು. ಮಧ್ಯಾಹ್ನ ಕುಂಭಾಭಿಷೇಕ, ಮಹಾ ಮಂಗಳಾರತಿ ನಡೆಯಿತು. ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.





