Mysore
19
few clouds

Social Media

ಸೋಮವಾರ, 04 ನವೆಂಬರ್ 2024
Light
Dark

ಮೈಸೂರಿನ ಸರಸ್ವತಿ ಚಿತ್ರಮಂದಿರ ಇನ್ನು ನೆನಪು ಮಾತ್ರ: ಕಟ್ಟಡ ನೆಲಸಮ

ಮೈಸೂರು: ನಾಲ್ಕು ದಶಕಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ್ದ ನಗರದ ಸರಸ್ವತಿ ಚಿತ್ರಮಂದಿರ ನೆನಪಿನಂಗಳಕ್ಕೆ ಸರಿಯುತ್ತಿದೆ. ಪ್ರೇಕ್ಷಕರ ಕೊರತೆಯಿಂದ ಕೋವಿಡ್‌ ಸಮಯದಲ್ಲಿ ಮುಚ್ಚಿದ ಈ ಚಿತ್ರಮಂದಿರದ ಕಟ್ಟಡ ನೆಲಸಮವಾಗುತ್ತಿದೆ.

1990ರಲ್ಲಿ ನಿರ್ಮಾಣಗೊಂಡಿದ್ದ ಸರಸ್ವತಿ ಚಿತ್ರಮಂದಿರ ಸಿನಿಪ್ರಿಯರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದೆ. ಮೈಸೂರು ನಗರ, ಗ್ರಾಮಾಂತರ ಪ್ರದೇಶದ ಸಿನಿ ರಸಿಕರಿಗೆ ಹಲವಾರು ದೊಡ್ಡ ಹಾಗೂ ಹೊಸ ನಟರ ಚಿತ್ರಗಳ ರಸದೌತಣ ನೀಡಿದ್ದ ಸರಸ್ವತಿ ಚಿತ್ರಮಂದಿರ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು. ಇದೀಗ ಪ್ರೇಕ್ಷಕರ ಕೊರತೆ ಹಾಗೂ ಕೋವಿಡ್‌ನ ಆರ್ಥಿಕ ಸಂಕಷ್ಟದ ಕಾರಣದಿಂದ ಚಿತ್ರಮಂದಿರ ಮಣ್ಣಾಗುತ್ತಿದ್ದು, ನೆಲಸಮ ಕಾರ್ಯಚರಣೆ ಭರದಿಂದ ಸಾಗುತ್ತಿದೆ.

ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ:
ನಾಲ್ಕೂ ದಶಕದಿಂದ ಸಿನಿಪ್ರಿಯರ ಮನೆಮಾತಗಿರುವ ಸರಸ್ವತಿ ಚಿತ್ರಮಂದಿರ ಕನ್ನಡ ಚಿತ್ರಗಳನ್ನಷ್ಟೇ ಇಲ್ಲಿಯವರೆಗೂ ಪ್ರದರ್ಶನ ಮಾಡಿರುವ ಹೆಗ್ಗಳಿಕೆ ಹೊಂದಿದೆ. ಬಹುತೇಕ ಪುನೀತ್ ರಾಜ್‌ಕುಮಾರ್‌ ಸಿನಿಮಾಗಳ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರಕ್ಕೂ ರಾಜ್‌ಕುಮಾರ್‌ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.

ವರ್ಷದಿಂದ ವರ್ಷಕ್ಕೆ ಒಂದೊಂದೆ ಚಿತ್ರಮಂದಿರ ನೆಲಸಮ
ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಒಂದೊಂದೆ ಚಿತ್ರಮಂದಿರಗಳನ್ನು ಮುಚ್ಚಲಾಗುತ್ತಿದೆ. ನಗರದಲ್ಲಿ 16 ಚಿತ್ರಮಂದಿರ ಇತ್ತು. ಕೋವಿಡ್‌ಗೆ ಮುನ್ನ ರಣಜಿತ್‌, ಓಪೇರಾ, ಸ್ಟರ್ಲಿಂಗ್‌, ಶಾಲಿಮಾರ್‌ ಚಿತ್ರಮಂದಿರವನ್ನು ಮುಚ್ಚಲಾಯಿತು.
ಕೋವಿಡ್‌ ನಂತರ ಶ್ರೀನಾಗರಾಜ್‌, ಶಾಂತಲಾ, ಲಕ್ಷ್ಮೀ, ಸರಸ್ವತಿ ಥಿಯೇಟರ್‌ ಮುಚ್ಚಲಾಗಿದೆ. ಇದರಲ್ಲಿ ಕೆಲವು ಚಿತ್ರಮಂದಿರಗಳ ಕಟ್ಟಡವೂ ನೆಲಸಮಗೊಳಿಸಲಾಗಿದೆ.

Tags: