Mysore
26
haze

Social Media

ಗುರುವಾರ, 01 ಜನವರಿ 2026
Light
Dark

ಹೊಸ ಸೇವೆ ಆರಂಭಿಸಿದ ಮೈಸೂರು ಮಹಾ ನಗರ ಪಾಲಿಕೆ

ಮೈಸೂರು : ಇನ್ನು ಮುಂದೆ ಮೈಸೂರಿನ ವ್ಯಾಪಾರಸ್ಥರು ಟ್ರೇಡ್‌ ಲೈಸನ್ಸ್‌ ನವೀಕರಣ ಮಾಡಲು ಪಾಲಿಕೆ ಕಚೇರಿಗೆ ಅಲೆಯಬೇಕಿಲ್ಲ. ತಾವಿರುವ ಸ್ಥಳದಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ವ್ಯಾಪಾರ ಪರವಾನಗಿ ಪಡೆಯಬಹುದಾಗಿದ್ದು, ಈ ಹೊಸ ಸೇವೆಯನ್ನು ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದೆ.

ವ್ಯಾಪಾರಸ್ಥರಿಗೆ   ಪರವಾನಗಿ ಶುಲ್ಕ ಪಾವತಿಸಲು ಅನುಕೂಲವಾಗಲು ತೆರಿಗೆ ಪಾವತಿಯ ವ್ಯವಸ್ಥೆಯ ಸರಳೀಕರಣಗೊಳಿಸಿರುವ ಬಗ್ಗೆ ವ್ಯಾಪಾರಸ್ಥರು ಸೇರಿದಂತೆ ನಾನಾ ಸಂಘಟನೆಗಳ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಮೇಯರ್‌ ಶಿವಕುಮಾರ್‌ ಅವರು, ಆನ್‌ಲೈನ್‌ ವ್ಯವಸ್ಥೆ ಮೂಲಕ ಟ್ರೇಡ್‌ ಲೈಸನ್ಸ್‌ ಸರಳೀಕರಣಗೊಳಿಸಿರುವ ಬಗ್ಗೆ ವ್ಯಾಪಾರಸ್ಥರ ಸಂಘಟನೆಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿ. ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಕೆಲ ವ್ಯಾಪಾರಸ್ಥರಿಗೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಯ ಪ್ರತಿಯನ್ನು ಸಭೆಯಲ್ಲಿ ನೀಡಲಾಯಿತು.

ಸಭೆಯಲ್ಲಿಉಪಮೇಯರ್‌ ಡಾ.ರೂಪಾ ಯೋಗೇಶ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌, ಪಾಲಿಕೆ ಸದಸ್ಯೆ ಅಶ್ವಿನಿ ಅನಂತು, ಆಯುಕ್ತ ಜಿ.ಲಕ್ಷೀಕಾಂತ ರೆಡ್ಡಿ, ಆರೋಗ್ಯಾಧಿಕಾರಿ ಡಾ.ನಾಗರಾಜು, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್‌, ಮೈಸೂರು ಟ್ರೇಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ. ಪ್ರಶಾಂತ್‌ಗೌಡ, ಮೈಸೂರು ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯ ನಾರಾಯಣ್‌ ಸೇರಿದಂತೆ ನಾನಾ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಇನ್ನೂ ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಬಾರದೇ ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್‌ ಲೈಸನ್ಸ್‌ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರಿಂಟ್‌ ಕೂಡ ಪಡೆಯಬಹುದಾಗಿದೆ ಎಂದು ಮೇಯರ್‌ ಶಿವಕುಮಾರ್‌ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!