ಎಚ್.ಡಿ.ಕೋಟೆ : ಪಟ್ಟಣದ ಗದ್ದಿಗೆ ಸರ್ಕಲ್ ಬಳಿ ಅಕ್ರಮವಾಗಿ ಒಣಗಾಂಜಾ ಸೊಪ್ಪು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಕೋಟೆ ಪೊಲೀಸರು ಬಂಧಿಸಿ, ಗಾಂಜಾ ಸೊಪ್ಪು ಮತ್ತು ಮಾರಾಟ ಮಾಡಲು ಬಳಸುತ್ತಿದ್ದ ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ನಿವಾಸಿ ದೇವರಾಜು ಕುಮಾರ್ ಅಲಿಯಾಸ್ ಅಪ್ಪು ಕುಮಾರ್ ಬಂಧಿತ ಆರೋಪಿ. ೧೭೫ ಗ್ರಾಂ ಗಾಂಜಾ ಸೊಪ್ಪನ್ನು ಬಿಡಿಬಿಡಿಯಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್‌ಪಿ ಮಲ್ಲಿಕ್, ನಾಗೇಶ್, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ಎಸ್‌ಐ ಚಿಕ್ಕನಾಯಕ, ಗುಪ್ತ ಮಾಹಿತಿ ಸಿಬ್ಬಂದಿ ಸೈಯದ್ ಕಬೀರುದ್ದಿನ್, ಯೋಗೇಶ್, ಮೋಹನ್, ಮಹೇಶ್, ಮಹದೇವ, ಡ್ರೈವರ್ ನಾಗರಾಜು ಅವರು ದಾಳಿ ನಡೆಸಿ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





