Mysore
22
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘಕಾಲದ ಯುದ್ಧಕ್ಕೆ ಸಿದ್ಧ ; ಇರಾನ್‌

ಹೊಸದಿಲ್ಲಿ : ಇರಾನ್‌ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ತಳ್ಳಿ ಹಾಕಿರುವ ಇರಾನ್‌ ಅಗತ್ಯವಿದ್ದರೆ ನಾವು ದೀರ್ಘಕಾಲ ಯುದ್ಧ ಮುಂದುವರಿಸಲು ಸಿದ್ಧವಿದ್ದೇವೆ ಎಂದು ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಅಮೆರಿಕ ಹೇಳಿಕೆಯನ್ನು ಇರಾನ್‌ ದೇಶದ ಭಾರತದ ಪ್ರತಿನಿಧಿ ಅಬ್ದುಲ್‌ ಮಜೀದ್‌ ಹಕೀಂ ಇಲಾಹಿ ತಳ್ಳಿಹಾಕಿದ್ದು, ಇರಾನ್‌ ಯುದ್ಧಕ್ಕೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಸಂದರ್ಶನದಲ್ಲಿ ಮಾತನಾಡಿರು ಅವರು, “ನಾವು ಯುದ್ಧ ಬಯಸಲಿಲ್ಲ…ಮಾತುಕತೆ ನಡೆಯುತ್ತಿದ್ದಾಗ ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿ ಯುದ್ಧ ಆರಂಭಿಸಿತು” ಎಂದು ಇಲಾಹಿ ಆರೋಪಿಸಿದ್ದಾರೆ.

ಇನ್ನು ಮುಂದೆ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್‌ ಯಾವುದೇ ಆಸಕ್ತಿ ಹೊಂದಿಲ್ಲ. ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಇರಾನ್‌ ಪ್ರತಿಕ್ರಿಯೆಯಾಗಿ ದಾಳಿಗಳನ್ನು ಮುಂದುವರೆಸಿದೆ. ಈ ಯುದ್ಧ ಯಾವಾಗ ಮುಕ್ತಾಯವಾಗಲಿದೆ ಎಂಬುದು ನನಗೆ ತಿಳಿದಿಲ್ಲ, ಆದರೆ ಇರಾನ್‌ ಎಂದಿಗೂ ಶರಣಾಗುವುದಿಲ್ಲ ಕೊನೆಯವರೆಗೂ ಹೋರಾಡಲು ಸಿದ್ಧ ಎಂದು ಅವರು ಒತ್ತಿ ಹೇಳಿದ್ದಾರೆ.

Tags:
error: Content is protected !!