ಮೈಸೂರು : ನನ್ನಂತೆ ಪ್ರಾಮಾಣಿಕವಾಗಿ ಯಾವ ರಾಜಕಾರಣಿಯೂ ಬದುಕಲು ಸಾಧ್ಯವಿಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದರು.
ಮುಡಾ ಅಕ್ರಮದ ವಿಚಾರವಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ನನ್ನಂತೆ ಪ್ರಾಮಾಣಿಕವಾಗಿ ಯಾವ ರಾಜಕಾರಣಿಯೂ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಡಾದಿಂದ ನಾನು 100 ಸೈಟ್‌ಗಳನ್ನು ಪಡೆದಿದ್ದೇನೆ ಎಂದು ಆರೋಪ ಮಾಡಲಾಗುತ್ತಿದೆ. ನೂರು ಬೇಡ ಕೇವಲ ಒಂದು ಸೈಟ್ ಇರುವುದನ್ನು ಸಾಭೀತು ಮಾಡಿದರೆ ಅದನ್ನು ಅಲ್ಲೇ ಬರೆದು ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇಷ್ಟು ವರ್ಷದ ನನ್ನ ಸುದೀರ್ಘ ರಾಜಾಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದೆ ಬಂದಿದ್ದೇನೆ. ಸ್ವಾಭಿಮಾನ, ಪ್ರಾಮಾಣಿಕವಾಗಿ ಬೆಳದು ಒಂದು ಮಾದಿರಿ ವ್ಯಕ್ತಿಯಾಗಿದ್ದೇನೆ ಎಂದುರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿ ಬಳಿಕ ಇಷ್ಟು ವರ್ಷ ಶಾಸಕನಾಗಿದ್ದರೂ ಒಂದು ಕಮರ್ಷಿಯಲ್ ನಿವೇಶನ, ಬಾಡಿಗೆ, ಪೆಟ್ರೋಲ್ ಬಂಕ್ ಅಥವ ಒಂದು ಹೋಟೆಲ್ ನನ್ನ ಹೆಸರಲ್ಲಾಗಲಿ ಅಥವ ನನ್ನ ಕುಟುಂಬದವರ ಹೆಸರಲ್ಲಿ ಇದ್ದರೆ ಅದನ್ನು ಸ್ಥಳದಲ್ಲೇ ಯಾರಿಗೆ ಬೇಕಾದರೂ ಬರೆದುಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.