Mysore
25
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ನಂಜನಗೂಡು | ಚಿರತೆ ದಾಳಿಗೆ ಕುರಿ ಬಲಿ

ಮೈಸೂರು: ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಕುರಿ ಬಲಿಯಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗ್ರಾಮದ ರೈತ ಮಹಿಳೆ ರಾಜಮ್ಮ ಎಂಬುವವರಿಗೆ ಸೇರಿದ ಕುರಿ ಮರಿ ಬಲಿಯಾಗಿರುವುದು. ರಾಜಮ್ಮ ಎಂದಿನಂತೆ ಕುರಿಯನ್ನು ಮೇಯಿಸಿಕೊಂಡು ಸಂಜೆ ವೇಳೆ ಮನೆಯತ್ತ ವಾಪಸ್ಸಾಗುವ ವೇಳೆ ಊರಿನಂಚಿನಲ್ಲಿರುವ ಕೆರೆ ಬಳಿ ಚಿರತೆಯು ಕುರಿ ಮೇಲೆರಗಿದೆ. ಈ ವೇಳೆ ಅಲ್ಲೇ ಇದ್ದ ಗ್ರಾಮಸ್ಥರು ಕೂಗಾಡಿದ ನಂತರ ಚಿರತೆ ಕುರಿಯ ಕಳೇಬರವನ್ನು ಅಲ್ಲೇ ಬಿಟ್ಟು ಹೋಗಿದೆ.

ಗ್ರಾಮದಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ಚಿರತೆ ದಾಳಿಗಳು ನಡೆಯುತ್ತಿದೆ. ಇದರಿಂದ ಗ್ರಾಮದ ರೈತರು ಜಾನುವಾರುಗಳನ್ನು ಮೇಯಿಸುವುದಕ್ಕೆ ಹೋಗಲು ಭಯಬೀತರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ನಿರ್ಲಕ್ಷ ವಹಿಸಿರುವುದರಿಂದಲೇ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿದೆ ಎಂದು ಗ್ರಾಮದ ಸುರೇಶ್‌ ತಿಳಿಸಿದ್ದಾರೆ.

Tags:
error: Content is protected !!