ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸಿಂಗಾರಿಪುರ ಗ್ರಾಮದಲ್ಲಿ ಕಳೆದ ಮೂರು ವರ್ಷದ ಹಿಂದೆ ನಿರ್ಮಾಣವಾದ ವಾಟರ್ ಟ್ಯಾಂಕ್‌ನಲ್ಲಿ ನೀರಿನ ಭಾಗ್ಯವೇ ದೊರೆತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.
ತಾಲ್ಲೂಕಿನ ಸಿಂಗಾರಿಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ ವಾಟರ್ ಟ್ಯಾಂಕ್ ಅನ್ನು 2021-22 ನೇ ಸಾಲಿನಲ್ಲಿ ಹೆಡತಲೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಲಾಯಿತು. ಆದರೆ ಲಕ್ಷ ,ಲಕ್ಷ ಹಣದಲ್ಲಿ ನಿರ್ಮಾಣವಾಗಿರುವ ವಾಟರ್ ಟ್ಯಾಂಕ್‌ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, 3 ವರ್ಷ ಕಳೆದರೂ ನೀರಿನ ಭಾಗ್ಯ ಕಲ್ಪಿಸಿಯೇ ಇಲ್ಲ.
ನೀರಿನ ಭಾಗ್ಯ ದೊರೆಯದಿರುವ ಕಾರಣ ಬೇಸತ್ತ ಗ್ರಾಮಸ್ಥರು 3 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಟ್ಯಾಂಕ್‌ಗೆ ನೀರು ತುಂಬಿಸಿ ಅದರಿಂದ ನೀರು ಬಿಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಕ್ಯಾರೆ ಎನ್ನದಿರುವ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಇನ್ನು ಉಪಯೋಗಕ್ಕೆ ಬಾರದ ಹೊಸ ಟ್ಯಾಂಕ್‌ನಿಂದ ನೀರು ಬಿಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.





