ನಂಜನಗೂಡು: ಅಭಿಮಾನಿಗಳ ಹರ್ಷೊಧ್ಘಾರದ ನಡುವೆ ರೈಲ್ವೆ ಮೆಲ್ಸೇತುವೆಗೆ ಶ್ರೀನಿವಾಸ್ ಪ್ರಸಾದ್ ಹೆಸರಿನ ನಾಮಫಲಕ ಅನಾವರಣಗೊಂಡಿದೆ.
ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗೆ ಮಾಜಿ ಸಂಸದರಾದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಹೆಸರಿನ ನಾಮಫಲಕವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಹಾಗೂ ಪ್ರಸಾದ್ ಪುತ್ರಿ ಪ್ರತಿಮಾ ಪ್ರಸಾದ್ ಅವರು ಅನಾವರಣಗೊಳಿಸಿದರು.
ಈ ವೇಳೆ ಅಭಿಮಾನಿಗಳು ಹರ್ಷೋದ್ಘಾರದ ಝೇಂಕಾರ ಹೊರಡಿಸಿದರು. ಈ ವೇಳೆ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು, ನಮ್ಮ ತಂದೆ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಜನ್ಮ ದಿನೋತ್ಸವದಂದೇ ಧೀಮಂತ ನಾಯಕ, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೆಸರನ್ನು ಶಾಶ್ವತವಾಗಿಸುವ ಭಾಗ್ಯ ನನ್ನದಾಗಿದೆ. ಇದು ಅತ್ಯಂತ ಖುಷಿಯ ವಿಚಾರ ಎಂದು ಸಂತಸ ವ್ಯಕ್ಪಪಡಿಸಿದರು.
ಬಳಿಕ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್ ಪುತ್ರಿ ಪ್ರತಿಮಾ ಪ್ರಸಾದ್ ಅವರು, ಶ್ರೀನಿವಾಸ್ ಪ್ರಸಾದ್ ಹಾಗೂ ಧ್ರುವನಾರಾಯಣ್ ಅಭಿಮಾನಿಗಳ ಸಮ್ಮುಖದಲ್ಲಿ ಈ ನಾಮಫಲಕ ಅನಾವರಣವಾಗಿದ್ದು, ನಮ್ಮಲ್ಲಿನ ಸಾಮರಸ್ಯದ ದ್ಯೊತಕವಾಗಿದೆ. ಈ ಸಂತಸ ಮುಂದುವರಿಯಬೇಕು ಎಂದರು. ಈ ನಾಮಫಲಕ ಅನಾವರಣಕ್ಕಾಗಿ ಸಮ್ಮತಿಸಿದ ದರ್ಶನ್ ಧ್ರುವನಾರಾಯಣ್ ಅವರನ್ನು ಅಭಿನಂದಿಸಿದ ಪ್ರತಿಮಾ ಪ್ರಸಾದ್ ಅವರು, ನಗರಸಭೆಯ ಈ ಕಾರ್ಯ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.





