ಮೈಸೂರು : ಮೈಸೂರಿನ ಹೆಮ್ಮೆಯ ದೊರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ನೇ ಜನ್ಮ ದಿನೋತ್ಸವ ಹಾಗು ಪರಿಸರ ದಿನದ ಅಂಗವಾಗಿ ಸುಮಾರು 8000 ಚದರ ಅಡಿಯಲ್ಲಿ ರಂಗೋಲಿಯ ಮುಖಾಂತರ ನಾಲ್ವಡಿ ಅವರ ಚಿತ್ರವನ್ನು ಬಿಡಿಸಿ ಗೌರವ ಅರ್ಪಿಸಲಾಗಿದೆ.
ಕಾರ್ಯಕ್ರಮಕ್ಕೆ ನಮ್ಮ ಮೈಸೂರಿನ ಹೆಮ್ಮಯ ವಿದ್ಯಾ ಸಂಸ್ಥೆ ಯಾದ ಶಾಂತಲಾ ವಿದ್ಯಾ ಪೀಠ ಶಾಲೆ ಸಿದ್ದಾರ್ಥನಗರ, ಮೈಸೂರು ಇಲ್ಲಿನ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಎಂ ಎಸ್ ಇವರ ಅನುಧಾನದೊಂದಿದೆ (sponsor) ಪುನೀತ್ ಕಲಾವಿದರ ಬಳಗ ಮೈಸೂರು ಇವರ ತಂಡದಿಂದ ಶ್ರೀ ನಾಲ್ವಡಿ ಭಾವಚಿತ್ರವನ್ನು ಬಿಡಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಬ್ಬರು ಸಾಧಕರಿಗೆ ಶಾಂತಲಾ ವಿದ್ಯಾಪೀಠ ಪ್ರಶಸ್ತಿ2025 ಕೊಟ್ಟು ಗೌರವಿಸಲಾಗುತ್ತದೆ ಜೊತೆಗೆ ಎಲ್ಲಾ ಗೌರವಾನ್ವಿತ ವ್ಯಕ್ತಿಗಳು ಆಗಮಿಸಿ ಪುಷ್ಪರ್ಚನೆ ಜೊತೆಗೆ ದೀಪವನ್ನು ಹಚ್ಚಿ ಪೂಜ್ಯರನ್ನು ಸ್ಮರಿಸಲಾಯಿತು
ಇದೆ ಸಂಧರ್ಭದಲ್ಲಿ ಕಾವ್ಯಶ್ರೀ ವಿಧ್ಯಾರ್ಥಿನಿಗೆ ಶಾಂತಲಾ ವಿದ್ಯಾಪೀಠ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮೂಡಾ ಅಧ್ಯಕ್ಷ ಹೆಚ್ ವಿ ರಾಜೀವ್, ರಾಷ್ಟ್ರೀಯ ಆರಕ್ಷಕ್ ಮಂಚ್ ಅಧ್ಯಕ್ಷ ಗೋಪಾಲ್ ಕೃಷ್ಣ , ವಾಯುಪುತ್ರ ಡೆವಲಪರ್ಸ್ ಮಾಲಿಕರು ಸಮಾಜ ಸೇವಕ ಚೆಲುವರಾಜು , ಶಾಂತಲ ವಿದ್ಯಾಪೀಠ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





