Mysore
15
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಸೀಮಾ ಮೊದಲ ಮಹಿಳಾ ನಿರ್ದೇಶಕಿ

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಮಹಿಳಾ ನಿರ್ದೇಶಕಿಯಾಗಿ ಭಾರತೀಯ ಅರಣ್ಯ ಸೇವೆ (I F S) ಅಧಿಕಾರಿ ಪಿ.ಎ ಸೀಮಾ ಅಧಿಕಾರಿ ಸ್ವೀಕರಿಸಿದ್ದಾರೆ.

ಮೂಲತ: ಮಡಿಕೇರಿಯ ನಾಪೋಕ್ಲುವಿನ ಪಾಡ್ಯಮಂಡ ಗ್ರಾಮದವರಾದ ಪಿ.ಎ ಸೀಮಾ ರವರು ಈ ಹುದ್ದೆ ಅಲಂಕರಿಸುವ ಮೂಲಕ ಕರ್ನಾಟಕದ ಮೊಟ್ಟ ಮೊದಲ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮಹಿಳೆ ನಿರ್ದೇಶಕಿ ಎಂದೆನಿಸಿಕೊಂಡಿದ್ದಾರೆ.

ಸೀಮಾ ಅವರು ಈ ಹಿಂದೆ ಹುಣಸೂರು ವಿಭಾಗದ ಡಿ.ಸಿ.ಎಫ್ ಆಗಿ ಸೇವೆ ಸಲಿಸಿದ್ದರು. 2017ರ ಬ್ಯಾಚ್‌ ಅಧಿಕಾರಿಯಾದ ಅವರು, ಮೈಸೂರು, ಮಂಡ್ಯ, ಹುಣಸೂರು, ಮಡಿಕೇರಿಯಲ್ಲಿ ಡಿ ಸಿ ಎಫ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿ.ಸಿ.ಎಫ್ ಆಗಿ ಕಾರ್ಯನಿರ್ವಹಿಸಿ ಹುಣಸೂರು ಹಾಗೂ ಕೆ ಆರ್ ನಗರದ ವಿಭಾಗದಲ್ಲಿ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಪ್ರಶಂಸೆಗೆ ಒಳಗಾಗಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕೇರಳ ಕರ್ನಾಟಕ ಭಾಗ ಹಾಗೂ ಕೊಡಗು ಮತ್ತು ಮೈಸೂರು ಗಡಿ ಭಾಗವನ್ನು ಕೂಡ ಹೊಂದಿದ್ದು ಇಲ್ಲಿ ನಿರಂತರ ಬೇಟೆಯಾಡುವುದು ಹಾಗೂ ಆನೆ ಮಾನವ ನಡುವೆ ಸಂಘರ್ಷವನ್ನು ತಡೆಗಟ್ಟಲು ಉತ್ತಮ ಅಧಿಕಾರಿಯ ನಿರೀಕ್ಷೆಯಲ್ಲಿದ್ದ ಸ್ಥಳೀಯರಿಗೆ ಪಿ.ಎ ಸೀಮಾ ರವರ ಆಯ್ಕೆ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.

Tags:
error: Content is protected !!