Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಅಹಂ ನಿಂದ ಸ್ವಯಂ ಕಡೆಗೆ ಹೋಗುವ ಮಾರ್ಗವೇ ಯೋಗ: ಮಾಜಿ ಸಚಿವ ಎನ್.ಮಹೇಶ್

ಮೈಸೂರು: ಇಂದು ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ತಂಡವು ಪಕ್ಷದ ಕಚೇರಿಯ ಮುಂಭಾಗ ವಿವಿಧ ಭಂಗಿಯ ಬೃಹತ್ ಯೋಗಾಸನ ಮಾಡುವ ಮುಖಾಂತರ ಅರ್ಥಪೂರ್ಣ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಯೋಗಾಸನ ಕುರಿತು ಮಾತನಾಡಿದ ಮಾಜಿ ಸಚಿವರಾದ ಎನ್. ಮಹೇಶ್ ರವರು ಯೋಗಾಸನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪ್ರತಿದಿನ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯೋಗಾಸನವನ್ನು ಮಾಡಿದರೆ ನಮ್ಮ ದೈನಂದಿನ ಜೀವನ ಬಹಳ ಉಲ್ಲಾಸಕರವಾಗಿರುತ್ತದೆ ಮನೆಯಲ್ಲಿ ಹಿರಿಯರು, ವೃದ್ಧರು, ಮಕ್ಕಳು, ಯುವಕರು, ಯುವತಿಯರು, ಯೋಗಭ್ಯಾಸ ಮಾಡಲೇಬೇಕು ಇದರಿಂದ ಆರೋಗ್ಯ ಹಾಗೂ ದೇಹದ ನರನಾಡಿಗಳು ಬಹಳ ಉತ್ತಮಕಾರಿಯಾಗಿ ಸಹಕರಿಸುತ್ತದೆ ಎಂದು ತಿಳಿಸಿದರು

ಬಳಿಕ ಮಾತನಾಡಿದ ಮಾಜಿ ಶಾಸಕ ನಿರಂಜನ್ ಕುಮಾರ್ ನಿಜಕ್ಕೂ ದೇಶಾದ್ಯಂತ ಇಂದು ನಡೆಯುತ್ತಿರುವ ವಿಶ್ವ ಯೋಗಾ ದಿನಾಚರಣೆ ಶ್ಲಾಘನೀಯ, ಭಾರತವು ಇಡೀ ಪ್ರಪಂಚಕ್ಕೆ ಯೋಗವನ್ನು ತೋರಿಸಿ ಕೊಡುವ ಮುಖಾಂತರ ಭಾರತ ವಿಶ್ವ ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ, ದೇಶದ ಪ್ರಧಾನಿ ನರೇಂದ್ರ ಮೋದಿಜಿ ರವರು ಯೋಗವನ್ನು ಮಾಡುವ ಮುಖಾಂತರ ಜಗತ್ತಿನ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ ಜೊತೆಗೆ ಆರೋಗ್ಯಕರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು

ಮೈಸೂರು ಜಿಲ್ಲಾಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ,ಯೋಗ ಶಿಕ್ಷಕರಾದ ಮುತ್ತಣ್ಣ ಬಿಡಣಾಳು , ಮೈಸೂರು ನಗರದ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಗರ ಉಪಾಧ್ಯಕ್ಷ ಜೋಗಿ ಮಂಜು, ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚ್ಚಿನ್, ಲೋಹಿತ್, ಮಧು, ನಿಶಾಂತ್, ಅರ್ಜನ್, ದೇವರಾಜ್, ಗಜೇಂದ್ರ, ರಂಗಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು

Tags:
error: Content is protected !!