Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮೈಸೂರು | ಮಾವು ಮೇಳಕ್ಕೆ ಚಾಲನೆ

Mango Festival

ಮೈಸೂರು : ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಮಾವು ಮೇಳಕ್ಕೆ ಶಾಸಕ ಕೆ.ಹರೀಶ್‌ ಗೌಡ ಶುಕ್ರವಾರ ಚಾಲನೆ ನೀಡಿದರು.

ಇಂದಿನಿಂದ ಮೂರು ದಿನಗಳ ಕಾಲ ಮಾವು ಮೇಳ ನಡೆಯಲಿದ್ದು, ವೀಕೆಂಡ್ ಕಾರಣ ರೈತರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ರೈತರು ಮೇಳದಲ್ಲಿ ಭಾಗವಹಿಸಿದ್ದಾರೆ.

ಮೇಳದಲ್ಲಿ ಹತ್ತಾರು ಬಗೆಯ ಮಾವುಗಳ ಪ್ರದರ್ಶನವಿದ್ದು, ಮಾವು ಖರೀದಿಗೆ ಮೈಸೂರಿನ ಜನ ಮುಗಿಬೀಳುತ್ತಿದ್ದಾರೆ. ರಸಪೂರಿ, ಮಲ್ಲಿಕಾ ಮಲ್ಗೋವಾ, ಬಾದಾಮಿ ಸೇರಿದಂತೆ ಹತ್ತಾರು ಬಗೆಯ ಮಾವು ಒಂದೇ ವೇದಿಕೆಯಲ್ಲಿ ಕಂಡ ಸಾರ್ವಜನಿಕರು ಖರೀದಿಗೆ ಮುಗಿಬೀಳುತ್ತಿದ್ದಾರೆ.

ಮೊದಲನೇ ದಿನವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೂರು ದಿನಗಳ ಕಾಲದ ಮಾವು ಮೇಳವನ್ನು ಇನ್ನಷ್ಟು ದಿನಗಳ ವಿಸ್ತರಣೆ ಮಾಡಬೇಕು ಎಂದು ಸಾರ್ವಜನಿಕ ಒತ್ತಾಯಿದ್ದಾರೆ.

Tags:
error: Content is protected !!