ಮೈಸೂರು: ಕೆಲಸದ ನಿಮಿತ್ತ ಹೊರ ಹೋಗಿ ಬರುವುದಾಗಿ ಹೇಳಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಸೀಗಳ್ಳಿ ಗ್ರಾಮದಲ್ಲಿ ನಡೆದಿದೆ.
ಸೀಗಳ್ಳಿ ಗ್ರಾಮದ ಈಶ್ವರ ಎಂಬುವವರ ಪತ್ನಿ 25 ವರ್ಷದ ಸಿಂಚನ ಅವರು ಪುತ್ರಿ ರುತಿಕ್ಷ ಜೊತೆ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ:- ಹನೂರು| ಕ್ಷುಲ್ಲಕ ಕಾರಣಕ್ಕೆ 12 ವರ್ಷದ ಬಾಲಕ ಅತ್ಮಹತ್ಯೆ
ಏಪ್ರಿಲ್.25ರಂದು ಬೆಳಿಗ್ಗೆ ಮನೆಯಿಂದ ಹೋದವರು ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ಪತಿ ಈಶ್ವರ ಅವರು ಇಲವಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಸಿಂಚನ ಹಾಗೂ ಮಗುವನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





