Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ರಿಲ್ಯಾಕ್ಸ್ ಮೂಡ್‌ನಲ್ಲಿ ಅಭಿಮನ್ಯು ಮತ್ತು ತಂಡ

ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದೆ. ದಸರಾ ಮುಗಿದ ಬೆನ್ನಲ್ಲೇ ಅರಮನೆ ಆವರಣ ಬಿಕೋ ಎನ್ನುತ್ತಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಬಂದಿದ್ದವರು ಎಸೆದಿದ್ದ ತ್ಯಾಜ್ಯವನ್ನು ಸಿಬ್ಬಂದಿ ತೆರವುಗೊಳಿಸುವುದರಲ್ಲಿ ನಿರತರಾಗಿದ್ದಾರೆ.

ನಾಳೆ ತನ್ನ ಸ್ವಂತ ಜಾಗಕ್ಕೆ  ಹೋಗುವ ದಸರಾ ಗಜಪಡೆ ಕಳೆದ 2 ತಿಂಗಳಿಂದ ಮೈಸೂರಿನಲ್ಲಿದ್ದು ದಸರಾ ಆನೆಗಳು ನಾಳೆ ತನ್ನ ಜಾಗಕ್ಕೆ ಮರಳಲಿದೆ. ಇದೇ ಮೊದಲ ಬಾರಿ ವಿದ್ಯುತ್ ದೀಪಗಳ ಬೆಳಕಿನ ಅಲಂಕಾರದ ನಡುವೆ ಜಂಬೂಸವಾರಿ ಸಾಗಿದ್ದು ಸಾಕಷ್ಟು ಯಶಸ್ಸುಗಳಿಸಿದೆ. ಶುಕ್ರವಾರ ತನ್ನ  ಶಿಬಿರಗಳತ್ತ ಕ್ಯಾಪ್ಟನ್ ಅಭಿಮನ್ಯು ಮತ್ತು ತಂಡ ಪ್ರಯಾಣ ಬೆಳಸಲಿದೆ.

 ಅರಮನೆ ಆವರಣದಲ್ಲಿ ದಸರಾ  ಆನೆಗಳಿಗೆ ನಾಳೆ ವಿಶೇಷ ಪೂಜೆ ನೆರವೇರಿಸಲಾಗುವುದು. ನಂತರ  ಮೈಸೂರು ಅರಮನೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಬೀಳ್ಕೊಡುಗೆ ನೀಡಲಾಗುತ್ತದೆ.

ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ಯಶಸ್ವಿಯಾಗಿ ನಡೆದಿದ್ದು, ದಸರಾ ಗಜಪಡೆಯ ನಾಯಕ ಅಭಿಮನ್ಯು ಎಲ್ಲರ ಮನಗೆದ್ದಿದ್ದಾನೆ. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಜಂಬೂಸವಾರಿ ನಡೆಸಿಕೊಟ್ಟು ಕ್ಯಾಪ್ಟನ್ ಅಭಿಮನ್ಯು ಶಬಾಷ್‌ ಗಿರಿ ಪಡೆದಿದ್ದಾನೆ..

ವಿಶೇಷವಾಗಿ ಅರಮನೆ ಆವರಣದಲ್ಲಿರುವ ಅಭಿಮನ್ಯು ನೋಡಲು ಜನರು ಮುಗಿಬಿದ್ದಿದ್ದಾರೆ. ಜೊತೆಗೆ ಸಾರ್ವಜನಿಕರು ಅಭಿಮನ್ಯು ಬಳಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ