Mysore
18
broken clouds

Social Media

ಭಾನುವಾರ, 11 ಜನವರಿ 2026
Light
Dark

Mysuru dasara 2024: ಗಜಪಡೆಗೆ ಬರೋಬ್ಬರಿ 2,37,50,000 ವಿಮೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕಾಗಿ ದಿನಗಣನೆ ಆರಂಭವಾಗಿದ್ದು, ದಸರಾ ಗಜಪಡೆ ಇಂದು ಮೈಸೂರಿಗೆ ಆಗಮಿಸುತ್ತಿದೆ. ಇದಕ್ಕಾಗಿ, ಅರಣ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ಗಜಪಡೆ, ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ತಿಯ ವಿಮೆ ಮಾಡಲು ನಿರ್ಧಾರ ಮಾಡಿದೆ.

87,50,000 ರೂಪಾಯಿಯ ವಿಮೆ ಗಜಪಡೆಗೆ ನೀಡಲಾಗಿದೆ. 1 ಕೋಟಿ ರೂಪಾಯಿ ಮೊತ್ತದ ವಿಮೆ ಅರಣ್ಯ ಇಲಾಖೆ ಸಿಬ್ಬಂದಿಗೆ, ಮತ್ತು 50 ಲಕ್ಷ ರೂಪಾಯಿ ವಿಮೆ ಸಾರ್ವಜನಿಕರಿಗೆ ಮತ್ತು ಅವರ ಆಸ್ತಿಯಲ್ಲಿಯೂ ನೀಡಲಾಗಿದೆ. ಈ ವಿಮೆ, ಆಗಸ್ಟ್ 21ರಿಂದ ಆರಂಭವಾಗಿ ದಸರಾ ಮುಕ್ತಾಯವರೆಗೆ ಹಾಗೂ ಗಜಪಡೆ ಕಾಡು ಸೇರುವವರೆಗೆ ಮಾನ್ಯವಾಗಿರುತ್ತದೆ. 18 ಆನೆಗಳಿಗೆ 87,50,000 ರೂಪಾಯಿ ವಿಮೆ ನೀಡಲಾಗಿದೆ, ಮತ್ತು 50 ಜನರಿಗೆ ತಲಾ 2 ಲಕ್ಷದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಒಟ್ಟು 2,37,50,000 ರೂಪಾಯಿ ವಿಮೆ ಅರಣ್ಯ ಇಲಾಖೆಯು ಮಾಡಿದೆ.

Tags:
error: Content is protected !!