Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

Mysuru Dasara 2024: ವಿದ್ಯುತ್‌ ದೀಪಗಳಿಂದ ಝಗಮಗಿಸಲಿದೆ ಮೈಸೂರು

ಬೆಂಗಳೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಈ ಬಾರಿಯೂ ವಿದ್ಯುದ್ದೀಪಗಳಿಂದ ಝಗಮಗಿಸಲಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ನೇತೃತ್ವದಲ್ಲಿ ಸೋಮವಾರ(ಆ.12) ಬೆಳಕು ಭವನದಲ್ಲಿ ನಡೆದ ಸಭೆಯಲ್ಲಿ, ದಸರಾ ಉತ್ಸವ ಆರಂಭಕ್ಕೆ ಒಂದು ದಿನ‌ಮೊದಲು ಅಂದರೆ‌ ಅ. 2ರಿಂದ 21 ದಿನಗಳ ಕಲಾ ದೀಪಾಲಂಕಾರ ಮಾಡಲು‌ನಿರ್ಧರಿಸಲಾಗಿದೆ.

ಅಲ್ಲದೆ, ವಿದ್ಯುತ್ ದೀಪಾಲಂಕಾರ ಈ ಬಾರಿಯ ದಸರಾಗೆ ಮತ್ತಷ್ಟು ಕಳೆ ಕಟ್ಟಬೇಕು. ಈ ವಿಚಾರವಾಗಿ ಸೆಸ್ಕ್‌ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.

2024ರ ದಸರಾದಲ್ಲಿ 130 ಕಿ.ಮೀ. ರಸ್ತೆಗಳ ಉದ್ದದ್ದಕ್ಕೂ ದೀಪಗಳು ಬೆಳಗಲಿವೆ. 84 ವೃತ್ತಗಳು, ಉದ್ಯಾನವನ ಸೇರಿದಂತೆ ಪ್ರಮುಖ 64 ಸ್ಥಳಗಳಲ್ಲಿ ವಿದ್ಯುತ್‌ ದೀಪಗಳು ಕಂಗೊಳಿಸಲಿವೆ.

ಹಸಿರು ಚಪ್ಪರ, ಸುಸ್ವಾತಗ, ವಿವಿಧ ಕಮಾನುಗಳು, ನಿಗಮದ ಕಚೇರಿಗಳ ದೀಪಾಲಂಕಾರ, ಛಾಯಾಗ್ರಹಣ ಮತ್ತು ಸಮಾರಂಭಗಳ ವೇದಿಕೆ ಮತ್ತಿತರೆಡೆ ವಿದ್ಯುತ್ ದೀಪಾಲಾಂಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ  ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

Tags: