Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

2024ನೇ ಸಾಲಿನ ದಸರಾಗೆ ಪಂಜಿನ ಕವಾಯತಿನ ಮೂಲಕ ವರ್ಣರಂಜಿತ ತೆರೆ

ಮೈಸೂರು: ಮೈನವಿರೇಳಿಸಿದ ಚಮತ್ಕಾರ, ಬೆಂಕಿಯೊಂದಿಗೆ ಸರಸಾಟ, ನಿಬ್ಬೆರಗಾಗಿಸುವ ಅಶ್ವರೋಹಿ ದಳದ ಪಥಸಂಚಲನ, ಅತ್ಯಾಕರ್ಷಕ ನೃತ್ಯ, ಬಾನಂಗಳದಲ್ಲಿ ಚಿತ್ತಾರ, ವೈಭವದ ಸಂಗಮ…..

ಇವು ಜಂಬೂಸವಾರಿ ಬಳಿಕ ಬನ್ನಿಮಂಟಪದ ಪಂಚಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ಕಂಡ ದೃಶ್ಯಗಳಿವು. ಈ ಮೂಲಕ ʼವಿಶ್ವವಿಖ್ಯಾತ ಮೈಸೂರು ದಸರಾ 2024ʼಕ್ಕೆ ವರ್ಣರಂಜಿತ ತೆರೆಬಿತ್ತು.

ಸುಮಾರು ಎರಡು ಗಂಟೆ ನಡೆದ ಪ್ರದರ್ಶನ ನೆರೆದಿದ್ದ ಸಹಸ್ರಾರು ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ನುರಿತ ಸಾಹಸ ಪ್ರದರ್ಶನಕಾರರು ತಮ್ಮ ಅನುಭವ ಹಾಗೂ ಪ್ರತಿಭೆ ಧಾರೆ ಎರೆಯುವ ಮೂಲಕ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಹುಬ್ಬೆರುವಂತೆ ಮಾಡಿದರು.

ಚಿತ್ತಕರ್ಷಕ ಪಥಸಂಚಲನ ಹಾಗೂ ನೆರದಿದ್ದ ಪ್ರೇಕ್ಷಕರಲ್ಲಿ ದೇಶಪ್ರೇಮ ಉಕ್ಕಿ ಹರಿಯುವಂತೆ ಮಾಡಿದರೆ, ಶ್ವೇತಾಶ್ವ ತಂಡದವರು ಬೈಕ್‌ನಲ್ಲಿ ಮೆರೆದ ಚಾಕ ಚಕ್ಯತೆ, ಕುಶಲತೆಯಿಂದ ನೀಡಿದ ಕಸರತ್ತು ಎಲ್ಲರನ್ನೂ ಉಸಿರು ಬಿಗಿಹಿಡಿಯುವಂತೆ ಮಾಡಿತು. ಮತ್ತಷ್ಟು ಕಲಾವಿದರ ನೃತ್ಯ ವೈಭವದ ಮೂಲಕ ಜನರಿಗೆ ಮನರಂಜನೆ ಉಣಬಡಿಸಿದರು.

ಜಂಬೂಸವಾರಿಗೆ ಪುಷ್ಪರ್ಚನೆ ಮೂಲಕ ಚಾಲನೆ ನೀಡಿ ಸಿಎಂ, ಡಿಸಿಎಂ, ರಾತ್ರಿ ನಡೆದ ಪಂಜಿನ ಕವಾಯತಿನಲ್ಲೂ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌ ಅವರಿಗೆ ಪೊಲೀಸ್‌ ಇಲಾಖೆ ಗೌರವ ವಂದನೆ ಸಲ್ಲಿಸಿತು.

Tags: