ಮೈಸೂರು: ಕರ್ನಾಟಕದ ಪವಿತ್ರ ಕ್ಷೇತ್ರವೆಂದು ಹೆಸರಾದ ಟಿ.ನರಸೀಪುರದ ತ್ರೀವೇಣಿ ಸಂಗಮದಲ್ಲಿ ನಾಳೆಯಿಂದ (ಫೆ.10) ಮೂರು ದಿನಗಳ ಕಾಲ 13ನೇ ಕುಂಭಮೇಳ ನಡೆಯಲಿದೆ.
ಟಿ.ನರಸೀಪುರದ ತ್ರಿವೇಣಿ ಸಂಗಮದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಕುಂಭಮೇಳದ ಮೂಲ ಸೌಕರ್ಯದ ಬಗ್ಗೆ ಪರಿಶೀಲನೆ ನಡೆಸಿ, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಧಾರ್ಮಿಕ ಕಾರ್ಯಕ್ರಮಗಳು ಫೆ.10ರಂದು ಆರಂಭವಾಗಲಿದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅತಿಥಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.





