ಮೈಸೂರು: ಮನೆ ಗೋಡೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನಿಂದ ಅಣ್ಣ, ಅತ್ತಿಗೆ ಮಾರಣಾಂತಿಕ ಹಲ್ಲೆಗೊಳಗಾಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಕಾಮಾಕ್ಷಮ್ಮ, ಶ್ರೀಕಂಠೇಗೌಡ ಎಂಬ ದಂಪತಿ ಹಲ್ಲೆಗೊಳಗಾದವರು.
ತನ್ನ ಭಾಗದಲ್ಲಿರೋ ಮರ ತೆರವುಗೊಳಿಸಲು ಮುಂದಾಗಿದ್ದ ವೇಳೆ ತಮ್ಮ ದಶರಥ ಅದಕ್ಕೆ ಬೇಡವೆಂದು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಅಣ್ಣ ಶ್ರೀಕಂಠೇಗೌಡ, ತಮ್ಮ ದಶರಥ ಗೋಡೆ ಪ್ಲಾಸ್ಟರಿಂಗ್ ಮಾಡಿಸಲು ಮುಂದಾದ ವೇಳೆ ಅದಕ್ಕೆ ತಡೆಯೊಡ್ಡಿದ್ದ.
ಇದರಿಂದ ಕೋಪಗೊಂಡ ದಶರಥ, ಪುತ್ರ ಶಂಕರೇಗೌಡ ಆಲಿಯಾಸ್ ವಿದ್ಯಾ, ಸಂಬಂಧಿ ಹಂಡ್ರಂಗಿ ಗ್ರಾಮದ ಸಂದೀಪ್ ಸೇರಿ ಹಲವರು ಮಚ್ಚು, ರಾಡ್‌ಗಳಿಂದ ದಂಪತಿಗಳಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.





