Mysore
30
few clouds

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಮೈಸೂರು ಮೃಗಾಲಯದ ಸಿಂಹಿಣಿ ʻರಕ್ಷಿತʼ ಇನ್ನಿಲ್ಲ

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದ ಸುಮಾರು 21 ವರ್ಷ 4 ತಿಂಗಳ ವಯಸ್ಸಿನ ‘ರಕ್ಷಿತ’ ಸಿಂಹಿಣಿ ಶನಿವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದೆ.

ರಕ್ಷಿತ ಸಿಂಹಿಣಿಯು 2004ರ ಏಪ್ರಿಲ್ 1ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹಗಳಿಗೆ ಜನಿಸಿ, ಇದುವರೆವಿಗೂ ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಕ್ಷಿತಗೆ ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸಹಜವಾಗಿ ಸಾವನ್ನಪ್ಪಿದೆ. ಸಿಂಹಣಿಯ ಸಾವಿನಿಂದ ಮೈಸೂರು ಮೃಗಾಲಯಕ್ಕೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಮೃಗಾಲಯದ ಆಡಳಿತ ವರ್ಗ, ಪಶು ವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ರಕ್ಷಿತಳ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ.

ರಕ್ಷಿತಳ ಚಿಕಿತ್ಸೆಯ ಸಂದರ್ಭದಲ್ಲಿ ಜಾಗತಿಕ ಪಶು ವೈದ್ಯಕೀಯ ಸಮುದಾಯ ಮತ್ತು ವನ್ಯಜೀವಿ ಸಂರಕ್ಷಕರು ನೀಡಿದ ಬೆಂಬಲವನ್ನು ಶ್ಲಾಘಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!