ಮೈಸೂರು: ಮನೆಯಿಂದಲೇ ಕೆಲಸ ಎಂಬ ಜಾಹಿರಾತನ್ನು ನಂಬಿ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ನಂಬಿ ಷೇರು ಮಾರುಕಟ್ಟೆಗೆ ಹಣ ಹೂಡುವ ಮೂಲಕ 18 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ನಗರದ ಹೆಬ್ಬಾಳು ನಿವಾಸಿ ಮಹಿಳೆಯು ಇನ್ಸ್ಟಾಗ್ರಾಂ ಮೂಲಕ ಮನೆಯಲ್ಲಿ ಕೆಲಸ ಎಂಬ ಜಾಹಿರಾತನ್ನು ನೋಡಿದ್ದಾರೆ. ನಂತರ ಅಲ್ಲಿ ಕೆಲಸಕ್ಕೆ ಸೇರಿದ್ದಾರೆ. ಮೊದಲಿಗೆ ವೇತನ ಕೂಡ ದೊರಕಿದೆ.
ನಂತರ ಅಲ್ಲಿನವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಆಕೆ ಹಂತ ಹಂತವಾಗಿ 18,84,884 ರೂ. ಹಣವನ್ನು ಪಾವತಿಸಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.





