ಮೈಸೂರು: ಬಸ್ ಹತ್ತುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಕೇಂದ್ರಿಯ ಬಸ್ ನಿಲ್ದಾಣದ ಬಳಿ ಹಾಡಹಗಲೇ ನಡೆದಿದೆ.
ಶನಿವಾರ (ಮೇ.25) ಬನ್ನೂರಿನ ಆಶಾ ಎಂಬುವರು, ಸೀರೆ ಖರೀದಿಗೆ ನಗರದ ಸುಮಂಗಲಿ ಸಿಲ್ಕ್ ಸ್ಯಾರಿ ಸೆಂಟರ್‌ಗೆ ಬಂದಿದ್ದರು. ಖರೀದ ಬಳಿಕ ಆಶಾ ಅವರು ವಾಪಸ್ ಊರಿಗೆ ತೆರಳಲು ಕೇಂದ್ರಿಯ ಬಸ್ ನಿಲ್ದಾಳಕ್ಕೆ ಆಗಮಿಸಿದರು. ಈ ವೇಳೆ ಬಸ್ ಹತ್ತುತ್ತಿದ್ದಾಗ ಕತ್ತಿನಲ್ಲಿದ್ದ ಸು.2.40 ಲಕ್ಷ ಬೆಲೆ ಬಾಳುವ ಚಿನ್ನದ ಸರ ಕಳ್ಳರ ಪಾಲಾಗಿದೆ.
ಈ ಸಂಬಂಧ ಆಶಾ ಅವರು ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.