Mysore
25
haze

Social Media

ಶುಕ್ರವಾರ, 30 ಜನವರಿ 2026
Light
Dark

ಮಹಾರಾಜ ಟ್ರೋಫಿಗೆ ಮೈಸೂರು ವಾರಿಯರ್ಸ್‌ ಸಿದ್ದ…

ಮೈಸೂರು : ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆ.10ರಿಂದ 27ರವರೆಗೆ ನಡೆಯುವ ಮಹಾರಾಜ ಟ್ರೋಫಿಗೆ ಮೈಸೂರು ವಾರಿಯರ್ಸ್ ತಂಡ ಸಜ್ಜಾಗಿದ್ದು, ತಂಡದ ಆಟಗಾರರನ್ನು ಅನಾವರಣಗೊಳಿಸಲಾಯಿತು.

ಎನ್.ಆರ್ ಗ್ರೂಪ್ ಮಾಲೀಕತ್ವದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಅನುಭವಿ ಹಾಗೂ ಯುವ ಪ್ರತಿಭಾವಂತ ಆಟಗಾರರಿಂದ ಕೂಡಿದ್ದು, ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಆಟಗಾರರನ್ನು ಪರಿಚಯಿಸಲಾಯಿತು.

ತಂಡ: ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್, ಪ್ರಸಿದ್ದ್ ಕೃಷ್ಣ, ಕೃಷ್ಣಪ್ಪ ಗೌತಮ್, ಎಂ.ಆರ್. ಜಯಂತ್, ಗೌತಮ್ ಸಾಗರ್, ಎಸ್.ಎಂ.ಸಮಂತ್, ಕೆ.ಎಸ್.ಲಂಕೇಶ್, ಶಿಖರ್ ಶೆಟ್ಟಿ, ಎಲ್.ಆರ್. ಕುಮಾರ್, ಗೌತಮ್ ಮಿಶ್ರಾ, ಎಸ್.ಯು.ಕಾರ್ತಿಕ್, ಹರ್ಷಿಲ್ ಧರ್ಮಾನಿ, ಕುಶಾಲ್ ವಾದ್ವಾನಿ, ಧನುಷ್ ಗೌಡ, ಯಶೋವರ್ಧನ್ ಪರಂತಾಪ್, ಎಂ.ವೆಂಕಟೇಶ್, ಸಮಿತ್ ಕುಮಾರ್, ಶರತ್ ಶ್ರೀನಿವಾಸ್, ಸಿ.ಎ.ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಕೈ ಬೆರಳಿಗೆ ಗಾಯವಾಗಿರುವುದರಿಂದ ಆರಂಭಿಕ ಪಂದ್ಯಗಳಲ್ಲಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಆಗಸ್ಟ್ 11 ರಿಂದ ಪಂದ್ಯಾವಳಿ ಆರಂಭ
ವಿಶೇಷವೆಂದರೆ ಮಹಾರಾಜ ಟ್ರೋಫಿ 2025 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗರಾದ ಪ್ರಸಿದ್ಧ್ ಎಂ ಕೃಷ್ಣ, ಮನೀಷ್ ಪಾಂಡೆ ಮತ್ತು ಗೌತಮ್ ಕೆ ಅವರು ಆಡಲಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 11 ರಿಂದ 27ರವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದ್ದು, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ.

ವಿಶೇಷಚೇತನ ಕ್ರೀಡಾಪಟುಗಳಿಗೆ ನೆರವು
ಎನ್.ಆರ್.ಗ್ರೂಪ್ ಕ್ರಿಕೆಟ್ ಜತೆಗೆ ಸಾಮಾಜಿಕ ಸೇವಾ ಕಾಯ ಗಳನ್ನೂ ಮಾಡುತ್ತಿದೆ. ಅಂತೆಯೇ ಈ ಬಾರಿ ದಕ್ಷಿಣ ಏಷ್ಯಾದ ಮೊದಲ ವೀಲ್‌ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್(ಎಎಸ್‌ಎಲ್) ಟಿ20 ಜತೆಗೆ ಕಾಸ್ ಪಾರ್ಟನರ್‌ಶಿಪ್ ಮಾಡಿ ಕೊಂಡಿದೆ. ಈ ಮೂಲಕ ವಿಶೇಷಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಽಸಲು ನೆರವಾಗಲಿದೆ.

ಕಳೆದ ವರ್ಷದಂತೆಯೇ ಈ ವರ್ಷವೂ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತಿ ವಿಕೆಟ್‌ಗೆ 2 ಸಾವಿರ ರೂ., ಪ್ರತಿ ಸಿಕ್ಸರ್‌ಗೆ 1 ಸಾವಿರ ರೂ. ಮತ್ತು ಪ್ರತಿ ಬೌಂಡರಿಗೆ 500 ರೂ. ದೇಣಿಗೆ ನೀಡಲಿದೆ. ವಿಶೇಷಚೇತನ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ.

Tags:
error: Content is protected !!