ಕ್ಲಿಕ್ಸ್ ಕ್ಯಾಂಪಸ್‌ನ ಸಹಯೋಗದೊಂದಿಗೆ ವಿವಿ ವಿದ್ಯಾರ್ಥಿಗಳಿಗೆ ದೊರೆಯಲಿದೆ ಅನೇಕ ತರಬೇತಿ
ಮೈಸೂರು: ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕ್ಲಿಕ್ಸ್ ಕ್ಯಾಂಪಸ್ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕೆರಿಯರ್ ಹಬ್‌ನ ನಿರ್ದೇಶಕ ಪ್ರೊ.ಹಂಸವೇಣಿ ಮತ್ತು ಕ್ಲಿಕ್ಸ್ ಕ್ಯಾಂಪಸ್‌ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಟಿ.ಅರಸು ಅವರು ಒಪ್ಪಂದದ ಪತ್ರಗಳಿಗೆ ಸಹಿ ಹಾಕಿದರು.
ನಂತರ ಮಾತನಾಡಿದ ಪ್ರೊ.ಜಿ.ಹೇಮಂತ್ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಕ್ಲಿಕ್ಸ್ ಕ್ಯಾಂಪಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಹಯೋಗದಿಂದ ಬೆಂಗಳೂರಿನ ಡಾ.ಸಂತೋಷ್ ಕೋಶಿ ಅವರ ನೇತೃತ್ವದ ಕೊಶೀಸ್ ಸಮೂಹ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳಡಿ ವಿವಿ ವಿದ್ಯಾರ್ಥಿಗಳಿಗೆ ಅನೇಕ ತರಬೇತಿ ಕಾರ್ಯಕ್ರಮಗಳು ಉಚಿತವಾಗಿ ದೊರೆಯಲಿದೆ. ಅಲ್ಲದೇ, ರಾಜ್ಯದ ವಿವಿಗಳ ಪೈಕಿ, ಮೈಸೂರು ವಿವಿ ಈ ಒಡಂಬಡಿಕೆಗೆ ಒಳಪಟ್ಟಿರುವ ಪ್ರಥಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕ್ಲಿಕ್ಸ್ ಕ್ಯಾಂಪಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಟಿ.ಅರಸು ಮಾತನಾಡಿ, ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯುವುದರಿಂದ ಸರ್ಕಾರದ ವಿವಿಧ ಹುದ್ದೆಗಳ ಸ್ಪರ್ಧಾತ್ಮ ಕ ಪರೀಕ್ಷೆಗಳನ್ನು ಮತ್ತು ವಿವಿಧ ಬ್ಯಾಂಕಿಂಗ್ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಪಡೆಯಲು ಬೇಕಿರುವ ಮೆಂಟಲ್ ಎಬಿಲಿಟಿ, , ಸ್ಕಿಲ್ಸ್, ಗ್ರೂಪ್ ಡಿಸ್ಕಶನ್, ಸಂದರ್ಶನ ಪ್ರಕ್ರಿಯೆ ರೆಸ್ಯೂಮ್ ಬರೆಯುವ ಕೌಶಲ್ಯ ಸೇರಿದಂತೆ ಸುಮಾರು ೨೦೦ಕ್ಕೂ ಹೆಚ್ಚು ಗಂಟೆಗಳ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಸರ್ಕಾರದ ವಿವಿಧ ಹುದ್ದೆಗಳಿಗಾಗಿ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಅನುಕೂಲಮಾಡುವ ದೃಷ್ಟಿಯಿಂದ ಕನ್ನಡದಲ್ಲಿಯೂ ಹೊಸ ಕೋರ್ಸ್‌ಗಳು ಪ್ರತಿ ವಾರ ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕ್ಲಿಕ್ಸ್ ಕ್ಯಾಂಪಸ್‌ನ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಉಚಿತವಾಗಿ ಸೈನ್ ಆ್ಯಪ್ ಮಾಡಿಕೊಳ್ಳಬಹುದು. ವಿವಿಧ ಆ್ಯಪ್ ಹಾಗೂ ಕೋರ್ಸ್‌ಗಳನ್ನು ಉಚಿತವಾಗಿ ಕಲಿಯಬಹುದು. ಈ ಆನ್‌ಲೈನ್ ಕೋರ್ಸ್ ದಿನದ ೨೪ ಗಂಟೆಗಳೂ ಲಭ್ಯವಿದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಸಮಯದಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ.
-ಎಂ.ಟಿ.ಅರಸು, ಕ್ಲಿಕ್ಸ್ ಕ್ಯಾಂಪಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ