Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೈಸೂರು: ಹಿಂದೂ-ಮುಸ್ಲಿಂ ದಂಪತಿಯಿಂದ ವರಮಹಾಲಕ್ಷ್ಮಿ ಹಬ್ಬ

ಮೈಸೂರು: ಮುಸ್ಲಿಂ ಕುಟುಂಬವೊಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆಯನ್ನು ಬಿಂಬಿಸಿರುವ ಘಟನೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕೋಟೆ ಹುಂಡಿಯಲ್ಲಿ ನಡೆದಿದೆ.

ಕೋಟೆ ಹುಂಡಿಯಲ್ಲಿರುವ ಜಾಕೀರ್ ಹುಸೇನ್ ಹಾಗೂ ಮಮತ ದಂಪತಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ವಿಭಿನ್ನ ವಿನೂತನವಾಗಿ ಆಚರಿಸಿದರು. ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈಗ ಹಿಂದೂ-ಮುಸ್ಲಿಂ ಎರಡೂ ಧರ್ಮದ ಹಬ್ಬಗಳನ್ನು ಆಚರಿಸುವ ಮೂಲಕ ಈ ದಂಪತಿ ಸೌಹಾರ್ದತೆ ಮೆರೆಯುತ್ತಿದ್ದಾರೆ.

ಸುಮಾರು 7 ವರ್ಷದಿಂದ ಈ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬಕ್ರೀದ್ ಹಬ್ಬವನ್ನು ಆಚರಿಸಿದ್ದ ಈ ದಂಪತಿ ಇದೀಗ ಚಿಂತಕರ ಸಮ್ಮುಖದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಎಲ್ಲರೂ ಒಗ್ಗೂಡಬೇಕೆಂಬ ಒತ್ತಾಸೆಯಲ್ಲಿ ಈ ದಂಪತಿ ಈ ಹಬ್ಬ ಆಚರಣೆ ಮಾಡಿದ್ದಾರೆ.

Tags: