ಮೈಸೂರು : ಮೈಸೂರಿನ ಹೂಟಗಳ್ಳಿ ನಗರಸಭೆಯ ಕಮಿಷನರ್ ಹುದ್ದೆಗಾಗಿ ಹಾಲಿ ಕಮಿಷನರ್ ಸಂದೀಪ್ ಮತ್ತು ಈ ಹಿಂದೆ ಇದೇ ನಗರಸಭೆ ಕಮಿಷನರ್ ಆಗಿದ್ದ ನರಸಿಂಹಮೂರ್ತಿ ಎಂಬುವವರ ನಡುವೆ ಕಿತ್ತಾಟ ಶುರುವಾಗಿದೆ. ಈ ಹಿಂದೆ ಇಬ್ಬರು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು.
ನಿನ್ನೆ(ಫೆ.08) ಏಕಾಏಕಿ ನಗರಸಭೆಗೆ ಆಗಮಿಸಿದ ನರಸಿಂಹಮೂರ್ತಿ ಅವರು, ಕಮಿಷನರ್ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿದ ಘಟನೆ ಮೈಸೂರಿನ ಹೂಟಗಳ್ಳಿ ನಗರಸಭೆಯಲ್ಲಿ ದಾಖಲಾಗಿದೆ.
ನರಸಿಂಹಮೂರ್ತಿ ಅವರು ಕಮಿಷನರ್ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಬಂದ ಕಮಿಷನರ್ ಸಂದೀಪ್ಗೆ ಆತಂಕಕ್ಕೊಳಗಾಗಿದ್ದಾರೆ. ಕೊಡಲೇ ಕಮಿಷನರ್ ಕೊಠಡಿ ಆಚೆಯೇ ಟೇಬಲ್ ಹಾಕಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂದಂತಹ ಜನರ ಸಮಸ್ಯೆಯನ್ನ ಆಲಿಸುತ್ತಿದ್ದಾರೆ.
ಘಟನೆ ಸಂಬಂಧ ಹಾಲಿ ನಗರಸಭೆ ಕಮಿಷನರ್ ಸಂದೀಪ್ ಅವರು ನರಸಿಂಹಮೂರ್ತಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.





