Mysore
22
clear sky

Social Media

ಬುಧವಾರ, 01 ಏಪ್ರಿಲ 2026
Light
Dark

ಮೈಸೂರಿನಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

ಮೈಸೂರು: ನಗರದಲ್ಲಿ ಇಂದು(ಮೇ.೮) ಸುರಿದ ಧಾರಕಾರ ಮಳೆಗೆ ವಿವಿದೆಡೆ ಮರಗಳು ಧರೆಗುರಿಳಿದ್ದು, ಹಲವಾರು ವಾಹನಗಳು ಜಖಂಗೊಂಡಿವೆ.

ಆಗ್ರಹಾರ, ಹಾರ್ಡಿಂಜ್ ವೃತ್ತ, ಕುವೆಂಪು ನಗರ, ಸರಸ್ವತಿಪುರಂ, ವಿವೇಕ ನಗರ, ಬೋಗಾದಿ, ಎನ್, ಆರ್‌ ಮೋಹಲ್ಲ ಸೇರಿದಂತೆ ವಿವಿದೆಡೆ ಭರ್ಜರಿ ಮಳೆಯಾಗಿದ್ದು, ಅಗ್ರಹಾರದ ಕೆ.ಆರ್. ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕೆಎ೫೫ ೮೯೮೬ ನೋಂದಣಿ ಸಂಖ್ಯೆಯ ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು, ಆಟೋ ಜಖಂಗೊಂಡಿದೆ. ಚಾಲಕ ಅನಿಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಆಟೋದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಮರ ಬಿದ್ದಿದ್ದು, ಪ್ರಯಾಣಿಕರು ಆಟೋದಲ್ಲಿ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಇಲ್ಲಿಗೆ ಸಮೀದಲ್ಲಿಯೇ ಮತ್ತೆರಡು ಮರಗಳು ಧರೆಗುರುಳಿದ್ದು, ಕಾರೊಂದು ಜಖಂಗೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ನಗರ ಪಾಲಿಕೆಯ ಅಭಯ ತಂಡ ಮರ ತೆರವುಗೊಳಿಸುವಲ್ಲಿ ನಿರತವಾಗಿತ್ತು. ಜಯನಗರದ ರಸ್ತೆಯಲ್ಲಿ ಮರದ ಬೃಹತ್ ರೆಂಬೆಯೊಂದು ಧರೆಗುರುಳಿ ಸಂಚಾರ ಅಸ್ತವ್ಯಸ್ತವಾಗಿತ್ತು.

ನಗರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿ ೮.೧೫ಕ್ಕೆ ಬಿರುಗಾಳಿ ಆರಂಭವಾಯಿತು. ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಆರಂಭದಲ್ಲಿ ಬಿರುಗಾಳಿ ಸಹಿತ ಮಳೆಯಾಗಿ ತುಸು ಸಮಯದ ಬಳಿಕ ತುಂತುರು ಮಳೆ ಸುರಿಯಿತು.

Tags:
error: Content is protected !!