ಮೈಸೂರು : ನಗರ ಸೇರಿದಂತೆ ಜಿಲ್ಲೆಯ ವಿವಿಧೆ ಭಾಗಗಳಲ್ಲಿ ಶುಕ್ರವಾರ ರಾತ್ರಿ ಮಳೆಯಾಗಿದೆ. ಬಿಸಿಲ ಧಗೆಯಿಂದ ಬೆಂದಿದ್ದ ನೆಲ ಹಸಿರು ಮಯವಾಗಲು ಮಳೆ ಹದಮಾಡಿದೆ.
ಸಂಜೆಯಿಂದಲೇ ಮೋಡ ಕವಿದ ವಾತವಾರಣ ಇತ್ತು. ರಾತ್ರಿ 10 ಕ್ಕೆ ಆರಂಭವಾದ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು.
ನಗರದ ಗಂಗೋತ್ರಿ ಬಡವಾಣೆ, ಸರಸ್ವತಿಪುರಂ, ಕುವೆಂಪುನಗರ, ಆಗ್ರಹಾರ, ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಎನ್‌ಆರ್ ಮೋಹಲ್ಲಾ ಸೇರಿದಂತೆ ನಗರದಲ್ಲಿ ಉತ್ತಮ ಮಳೆಯಾಗಿದೆ.
ಇನ್ನೂ ಜಿಲ್ಲೆಯ ವಿವಿಧೆಡೆಯೂ ಮಳೆ ಸುರಿದಿದ್ದು, ಕೃಷಿ ಚುಟುವಟಿಕೆ ಚುರುಕುಗೊಂಡಿವೆ. ಮೈಸೂರು ನಗರ, ಪಿರಿಯಾಪಟ್ಟಣ, ಹುಣಸೂರಿನಲ್ಲಿ ಮಳೆಯಾಗಿದ್ದು, ಶುಂಠಿ, ಮುಸುಕಿನ ಜೋಳ, ತಂಬಾಕು ಬೆಳೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.