ಮೈಸೂರು: ವಿವಿಧ ಸ್ಥಳಗಳ ಬಗ್ಗೆ ಪರಿಚಯ ಮಾಡುವ ಆನ್‌ಲೈನ್ ಕೆಲಸಕ್ಕೆ ಸೇರಿದ್ದ ಇಂಜಿನಿಯರ್ ಒಬ್ಬರು ವಂಚಕರ ಮಾತನ್ನು ನಂಬಿ ೧೧ ಲಕ್ಷ ರೂ. ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಮೋಸಕ್ಕೆ ಒಳಗಾಗಿದ್ದಾರೆ.
ನಗರದ ವಿಜಯನಗರ ೨ನೇ ಹಂತದ ನಿವಾಸಿಯೊಬ್ಬರು ಆನ್‌ಲೈನ್ ಮೂಲಕ ಕೆಲ ಸ್ಥಳಗಳನ್ನು ಗ್ರಾಹಕರಿಗೆ ಪರಿಚಯ ಮಾಡಿಸುವ ಕೆಲಸಕ್ಕೆ ಸೇರಿದ್ದರು. ಇದಕ್ಕಾಗಿ ಅವರಿಗೆ ಕಂಪೆನಿ ಹಣವನ್ನು ನೀಡುತ್ತಿತ್ತು.
ಇದೇ ವೇಳೆ ಅಲ್ಲಿನ ವಂಚಕರು ನೀವು ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದಾರೆ. ಅವರ ಮಾತನ್ನು ನಂಬಿದ ಇಂಜಿನಿಯರ್ ಹಂತಹಂತವಾಗಿ ೧೧,೧೦ ಲಕ್ಷ ರೂ. ಹಣವನ್ನು ತೊಡಗಿಸಿ ವಂಚನೆಗೀಡಾಗಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





