ಮೈಸೂರು: ಬಿಸಿಲ ತಾಪದಿಂದ ಕಾದು ಕೆಂಡದಂತಾಗಿದ್ದ ಇಳೆಗೆ ಬುಧವಾರ ರಾತ್ರಿ ಸುರಿದ ಅಶ್ವಿನಿ ಮಳೆ ತಂಪೆರೆದಿದೆ.
ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಹುಣಸೂರು, ಪಿರಿಯಾಪಟ್ಟಣ ಹಾಗೂ ಎಚ್.ಡಿ ಕೋಟೆಯಲ್ಲಿ ಗುಡುಗು ಸಹಿತ ಜೋರು ಮಳೆ ಸುರಿಯಿತು. ಶುಂಠಿ, ಮುಸುಕಿನ ಜೋಳ, ತಂಬಾಕು ಬೆಳೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.
ಇನ್ನೂ ಮೈಸೂರು ನಗರದಲ್ಲೂ ಜೋರು ಮಳೆ ಸುರಿಯಿತು. ರಾತ್ರಿ 9.30ಕ್ಕೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ಗುಡುಗು, ಗಾಳಿಯ ಆರ್ಭಟವೂ ಇತ್ತು.
ಪ್ರಸಕ್ತ ವರ್ಷ ಏಪ್ರಿಲ್ 14ರಿಂದ ಅಶ್ವಿನಿ ಮಳೆ ಆರಂಭಗೊಂಡಿದ್ದು, ಎರಡು ದಿನಗಳಲ್ಲೆ ಧರೆ ತಂಪಾಗುವಂತೆ ಮಳೆ ಸುರಿದಿದೆ.





