Mysore
27
clear sky

Social Media

ಸೋಮವಾರ, 16 ಫೆಬ್ರವರಿ 2026
Light
Dark

ಮೈಸೂರು | ಏ.10 ರಿಂದ ʻಬೇಸಿಗೆ ಶಿಬಿರʼ

ಮೈಸೂರು: ರಂಗಾಂತರಂಗ ಮೈಸೂರು ರಂಗತಂಡದ ವತಿಯಿಂದ ನಗರದ ಕುವೆಂಪುನಗರ ಬಡಾವಣೆಯಲ್ಲಿರುವ ಮಕ್ಕಳ ಅಭಿನಯ ರಂಗಶಾಲೆಯಲ್ಲಿ ಕಲರವ ಮಕ್ಕಳ ಬೇಸಿಗೆ ಶಿಬಿರವನ್ನು ಏ.10ರಿಂದ ಮೇ.10ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಂತರಂಗ ಸಂಸ್ಥಾಪಕ ಕೀರ್ತಿರಾಜ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಸಿಗೆ ಶಿಬಿರವು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದ್ದು, ನಾಟಕ, ಮೈಮ್, ಜನಪದ ಗೀತೆಗಳು, ಯೋಗ ಮತ್ತು ಧ್ಯಾನ, ನೃತ್ಯ, ಚಿತ್ರಕಲೆ, ದೇಶಿ ಆಟಗಳು, ನಿರೂಪಣಾ ಕೌಶಲ್ಯ, ಧ್ವನಿ ಮತ್ತು ಭಾಷಣ ಕೌಶಲ್ಯ, ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥೆಗಳ ಬಗ್ಗೆ ಮಾಹಿತಿಗಳನ್ನು ತಿಳಿಸಲಾಗುವುದು. ಜೊತೆಗೆ ವಾರಂತ್ಯದ ತರಗತಿಗಳಲ್ಲಿ ಅಭಿನಯ, ಸಂಗೀತ ಮತ್ತು ನೃತ್ಯ ತರಬೇತಿನೀಡಲಾಗುವುದು ಎಂದು ಮಾಹಿತಿನೀಡಿದರು.

4 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದಶುಲ್ಕ 4000 ರೂ ನಿಗದಿಪಡಿಸಲಾಗಿದ್ದು, ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ಪ್ರವೆಶವಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ ಎಂ.ಎಂದ್ರಶೇಖರ್ ಮಾತನಾಡಿ, ಇತ್ತೀಚಿನ ಮಕ್ಕಳಿಗೆ ಹಳ್ಳಿಯ ಸೊಗಡು,ಅಜ್ಜಿ ಹೇಳಿಕೊಡುವಕಥೆಗಳು ಸೇರಿದಂತೆ ಯಾವ ಸೌಭಾಗ್ಯವೂ ಸಿಗುತ್ತಿಲ್ಲ. ಆದ್ದರಿಂದ ರಂಗ ತರಬೇತಿ ಶಿಬಿರಗಳು ಇತ್ತೀಚಿನ ವಿದ್ಯಾರ್ಥಿಗಳಲ್ಲಿ ವಿವಿಧ ಬಗೆಯ ಕಥೆಗಳನ್ನು, ಜಾನಪದ ಸೊಗಡನ್ನು ತಿಳಿಸುತ್ತದೆ. ಹೊಸ ಬಗೆಯ ಆಲೋಚನೆ ಮತ್ತು ಮೌಲ್ಯಗಳನ್ನು ಬಿತ್ತುವಲ್ಲಿ ರಂಗ ತರಬೇತಿ ಶಿಬಿರಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.

ಶಿಬಿರದ ನಿರ್ದೇಶಕ ಲೋಕನಾಥ್ ನೀನಾಸಂ, ಮಕ್ಕಳ ಪೋಷಕರಾದ ಚೆಲುವರಾಜು, ಹಿರಣ್ಣಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!