ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ವಂಚಿಸಿರುವ ಸೈಬರ್ ಖದೀಮರು, ಅವರುಗಳಿಂದ ಒಟ್ಟು 7.80 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ಷೇರು ಮಾರುಕಟ್ಟೆಮೂಲಕ ಹಣ ಹೂಡಿದಲ್ಲಿ ಹೆಚ್ಚಿನ ಅಭಾಂಶ ಬರುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ 7.19.360 ರೂ. ವಂಚಿಸಿರುವ ಘಟನೆ ನಡೆದಿದೆ.
ನಗರದ ಬಂಬೂಬಜಾರ್ ನಿವಾಸಿ ಹಣ ಕಳೆದುಕೊಂಡವರು. ಟೆಲಿಗ್ರಾಂ ಮೂಲಕ ವಂಚಕ ಪರಿಚಯ ಮಾಡಿಕೊಂಡು ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿಯ ಮಾತನ್ನ ನಂಬಿದ ಅವರು ಮೊದಲು ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ.
ಮೊದಲ ಹೂಡಿಕೆಗೆ ಲಾಭ ಬಂದಿದೆ. ನಂತರ ವಿವಿದ ಹಂತಗಳಲ್ಲಿ ಹಣ ಹೂಡಿದ್ದಾರೆ. ಖಾತೆಯಲ್ಲಿ ಹೆಚ್ಚಿನ ಮೊತ್ತ ಲಾಭ ತೋರಿಸಿದೆ. ಹಣ ಪಡೆಯಲು ಮುಂದಾದಾಗ ಮತ್ತೆ ಹಣ ಪಾವತಿಸುವಂತೆ ತಿಳಿಸಿದ್ದಾರೆ. ನಂತರ ತಾವು ಮೋಸ ಹೋಗಿರುವುದನ್ನ ಖಚಿತಪಡಿಸಿಕೊಂಡಿದ್ದಾರೆ.
ಎರಡನೇ ಪ್ರಕರಣದಲ್ಲಿ ನಿಮ್ಮ ಮಳಿಗೆಗೆ ಬೇಕಾದ ವಸ್ತಗಳನ್ನು ಸರಬರಾಜು ಮಾಡುತ್ತೇವೆ ಎಂದು ಹೇಳಿದ ವಂಚಕ ದಿನಸಿ ಮಳಿಗೆ ಮಾಲೀಕರೊಬ್ಬರಿಗೆ 60 ಸಾವಿರ ರೂ. ವಂಚಿಸಿದ್ದಾರೆ.
ನಗರದ ಅಗ್ರಹಾರದಲ್ಲಿರುವ ಲಕ್ಷಿ ಟಿಫಾನೀಸ್ ಬಳಿಯ ದಿನಸಿ ಮಳಿಗೆ ಮಾಲೀಕರಿಗೆ ಅಪರಿಚಿತರಿಂದ ಕರೆ ಬಂದಿದೆ. ನಿಮಗೆ ದಿನಸಿ ಸರಬರಾಜು ಮಾಡುತ್ತೇವೆ ಎಂದು ನಂಬಿಸಿ ಅವರಿಂದ 60 ಸಾವಿರ ರೂ. ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಎರಡೂ ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗಿವೆ.