Mysore
25
broken clouds

Social Media

ಗುರುವಾರ, 26 ಫೆಬ್ರವರಿ 2026
Light
Dark

ಮೈಸೂರು ರೇಷ್ಮೆಗೆ ದೊಡ್ಡ ಇತಿಹಾಸವಿದೆ: ಬಡಗಲಪುರ ನಾಗೇಂದ್ರ

ಮೈಸೂರು: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಈ ಕಾರ್ಖಾನೆ ರೈತರಿಗೆ ಸಂಬಂಧಿಸಿದ್ದು, ಪರಿಸರಕ್ಕೆ ಸಂಬಂಧಿಸಿದ್ದು. ಉದ್ಯೋಗ ಸೃಷ್ಟಿ ಮಾಡಿರುವಂತದ್ದು. ಮೈಸೂರು ರೇಷ್ಮೆಗೆ ಭಾರಿ ಇತಿಹಾಸವಿದೆ. ಪ್ರಪಂಚದ ಮೂಲೆ ಮೂಲೆಗೂ ಮೈಸೂರು ರೇಷ್ಮೆಗೆ ಭಾರಿ ಹೆಸರಿದೆ.

ಮೈಸೂರಿನ ರಾಜ ಮನೆತನ ಆಳ ದೂರದೃಷ್ಟಿಯಿಂದ ಈ ಕಾರ್ಖಾನೆ ಒತ್ತಾಸೆಯಿಂದ ಮಾಡಿದೆ. ಕ್ರೀಡಾಂಗಣಕ್ಕೆ ಯಾರ ವಿರೋಧವಿಲ್ಲ. ಕ್ರೀಡಾಂಗಣಬೇಕು.

ಆದರೆ ಈ KSIC ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕ ಇರುವ ಜಾಗ ಯಾಕೆ ಬೇಕು. ಇಲ್ಲಿ ಸಾಕಷ್ಟು ಮರಗಳಿವೆ.‌ನೂರಾರು ವರ್ಷದಿಂದ ಇರುವ ಈ ಪರಿಸರ ಹಾಳು ಮಾಡುವುದು ಬೇಡ.

ಮೈಸೂರು ರೇಷ್ಮೆ ಸೀರೆಗೆ ಸರತಿ ಸಾಲಿನಲ್ಲಿ ನಿಂತು ಸೀರೆ ಪಡೆಯುವ ಬೇಡಿಕೆ ಇರುವ ಈ ಸ್ಥಿತಿಯಲ್ಲಿ ಇಂತಹ ಮೈಸೂರು ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗೆ ತೊಂದರೆ ಮಾಡುವುದು ಬೇಡ ಎಂದರು.

 

Tags:
error: Content is protected !!