Mysore
25
scattered clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಮೈಸೂರು | ಜೋರಾಯ್ತು ಬಂಡೀಪುರ ಉಳಿಸಿ ಅಭಿಯಾನ

ಮೈಸೂರು : ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವಿಗೆ ವಿರೋಧಿಸುತ್ತಿರುವ ಪರಿಸರವಾದಿಗಳು, ಪ್ರಾಣಿಪ್ರಿಯರು ಹಾಗೂ ಸಂಘಟನೆಗಳು ಭಾನುವಾರ(ಏ.6) ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿವೆ.

ಗಂಧದಗುಡಿ ಫೌಂಡೇಶನ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಗೆ ವಿದ್ಯಾರ್ಥಿಗಳು, ಮಹಿಳೆಯರೂ ಸೇರಿದಂತೆ ಪ್ರಾಣಿಪ್ರೀಯರು ಕೈಜೋಡಿಸಿದರು. ನಗರದ ಬಲ್ಲಾಳ್‌ ವೃತ್ತದಿಂದ ಅರಣ್ಯ ಭವನದವರೆಗೆ ಮೆರವಣಿಗೆ ನಡೆಯಿತು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧಿಸಬೇಕು. ರಾತ್ರಿ ವಾಹನಗಳ ಸಂಚಾರದಿಂದ ಅರಣ್ಯ ನಾಶ, ಪ್ರಾಣಿಗಳ ಹಾನಿಯಾಗುತ್ತದೆ.
ಆದ್ದರಿಂದ ರಾತ್ರಿ ಸಂಚಾರ ನಡೆಸದಂತೆ ರಾಜ್ಯ ಸರ್ಕಾರ ಕ್ರಮವಹಿಸಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Tags: