Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು: ನಿಯಮ ಉಲ್ಲಂಘನೆಗೆ ದಂಡ ಶುಲ್ಕ ನಿಗಧಿ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಪ್ರತಿನಿತ್ಯ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡುವುದು . ಇಲ್ಲವಾದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಅಧಿಸೂಚನೆಯoತೆ ದಂಡ ಶುಲ್ಕ ವಿಧಿಸಲಾಗುತ್ತದೆ.

ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಸ್ವಚ್ಛತೆ ಕಾಪಾಡಲು ವಿಫಲವಾದಲ್ಲಿ ರೂ.500 (ಮೊದಲ ಬಾರಿ) 1000 ರೂ. (ಪುನರಾವರ್ತಿ) ದಂಡ, ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಹಾಗೂ ಒಣಕಸ, ಕೈತೋಟದ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ತ್ಯಾಜ್ಯ ಸಂಗ್ರಹಕಾರರಿಗೆ ನೀಡದಿದ್ದಲ್ಲಿ ನಿವಾಸಿಗಳಿಗೆ- ರೂ.200, ವಾಣಿಜ್ಯ ಉದ್ದಿಮೆದಾರರಿಗೆ-ರೂ.500(ಮೊದಲ ಬಾರಿ), ನಿವಾಸಿಗಳಿಗೆ-ರೂ.500, ವಾಣಿಜ್ಯ ಉದ್ದಿಮೆದಾರರಿಗೆ ರೂ.1000(ಪುನರಾವರ್ತಿ) ದಂಡ, ಎಲ್ಲಾ ರೀತಿಯ ಚರಂಡಿಗಳಲ್ಲಿ ತ್ಯಾಜ್ಯ ಬಿಸಾಡುವವರಿಗೆ ರೂ.500 (ಮೊದಲ ಬಾರಿ) ರೂ.1000(ಪುನರಾವರ್ತಿ) ದಂಡ, ತ್ಯಾಜ್ಯ ಸುಡುವವರಿಗೆ 1. ರಸ್ತೆಬದಿಯಲ್ಲಿ ಎಲೆ ತ್ಯಾಜ್ಯ ಸುಡುವವರಿಗೆ ರೂ.200, 2.ಪ್ಲಾಸ್ಟಿಕ್ ವಸ್ತುಗಳನ್ನು ಮತ್ತು ಒಣತ್ಯಾಜ್ಯ ಸುಡುವವರಿಗೆ-ರೂ.500, 3.ಇ- ತ್ಯಾಜ್ಯ ಸುಡುವವರಿಗೆ ರೂ.1000(ಮೊದಲ ಬಾರಿ), ಕ್ರಮವಾಗಿ ಪುನರಾವರ್ತಿಗೆ ರೂ 500, 1000, 5000 ದಂಡ, ಭಾರಿ ತ್ಯಾಜ್ಯ ಜನಕರು(Bulk Waste Generator)ಗಳಾದ ಹಾಸ್ಟೆಲ್, ಹೊಟೇಲ್ ಅಥವಾ ರೆಸ್ಟೋರೆಂಟ್, ವಿದ್ಯಾಸಂಸ್ಥೆಗಳು, ಕಲ್ಯಾಣ ಮಂಟಪಗಳು, ಮಾಲ್‌ಗಳು, ವಾಣಿಜ್ಯ ಕಟ್ಟಡಗಳು, ಕೋಚಿಂಗ್ ಸೆಂಟರ್, ಸರ್ಕಾರಿ ಕಚೇರಿಗಳು, ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ, ವಸ್ತು ಪ್ರದರ್ಶನ ಇತ್ಯಾದಿ ಸ್ಥಳಗಳಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಪ್ರತ್ಯೇಕ ಸ್ಥಳದಲ್ಲಿ ಜೈವಿಕ ಅಥವಾ ವೈಜ್ಞಾನಿಕವಾಗಿ ಸಂಸ್ಕರಿಸದಿದ್ದಲ್ಲಿ ರೂ.20,000(ಮೊದಲ ಬಾರಿ) ರೂ.50,000 (ಪುನರವರ್ತಿ) ದಂಡ ಹಾಗೂ ಸಾರ್ವಜನಿಕರು ಕಟ್ಟಡ ಭಗ್ನಾವಶೇಷ ತ್ಯಾಜ್ಯವನ್ನು ನಿಗಧಿತ ಜಾಗದಲ್ಲಿ ವಿಲೇವಾರಿ ಮಾಡದಿದ್ದಲ್ಲಿ ರೂ.5000 (ಮೊದಲ ಬಾರಿ) ರೂ.10000(ಪುನರವರ್ತಿ) ದಂಡವನ್ನು ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಮಧು ಎನ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: