ಮೈಸೂರು: ಮನೆ ನಿರ್ಮಾಣಕ್ಕೆ ಖಾತೆ ಹಾಗೂ ನಕ್ಷೆ ಅನುಮೋದನೆಗೆ ಲಂಚ ಪಡೆಯುವಾಗ ಹೊಟಗಳ್ಳಿ ನಗರಸಭೆ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು, ದಿನೇಶ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಿಲ್ ಕಲೆಕ್ಟರ್ ದಿನೇಶ್ ಮನೆ ನಿರ್ಮಾಣ ಹಾಗೂ ನಕ್ಷೆ ಅನುಮೋದನೆಗೆ 2ಲಕ್ಷ ಲಂಚ ಕೇಳಿದ್ದರು. ಬುಧವಾರ ಸಂಜೆ ನಗರಸಭೆಯ ಬಳಿಯ ಟೀ ಅಂಗಡಿಯೊಂದರಲ್ಲಿ 40 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ತಡರಾತ್ರಿಯವರೆಗೆ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಲೋಕಾಯುಕ್ತ ಎಸ್.ಪಿ ಟಿ.ಜೆ ಉದೇಶ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದೆ.





