ಕಪಿಮುಷ್ಠಿಯಿಂದ ಬಚಾವ್ ಆದ ಮಹಿಳೆ
ತಡವಾಗಿ ಬೆಳಕಿಗೆ ಬಂದ ಪ್ರಕರಣ
ಮೈಸೂರು : ಮಧ್ಯರಾತ್ರಿ ವೇಳೆ ಬಲವಂತವಾಗಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ವಿದೇಶಿ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.
ವಿದೇಶಿ ಮಹಿಳೆಯ ಸಮಯಪ್ರಜ್ಞೆ ಆಕೆಯನ್ನ ಅನಾಹುತದಿಂದ ಪಾರು ಮಾಡಿದೆ.ಅಪರಿಚಿತನ ವಿರುದ್ದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಯು.ಕೆ.ಪ್ರಜೆ 45 ವರ್ಷದ ಮಹಿಳೆಯಿಂದ ಪ್ರಕರಣ ದಾಖಲಾಗಿದೆ.ಜುಲೈ 18 ರಂದು ಯೋಗಾಭ್ಯಾಸಕ್ಕಾಗಿ ಪ್ರವಾಸಿ ವೀಸಾದಲ್ಲಿ ಬಂದ ಯು.ಕೆ.ಮಹಿಳೆ ಗೋಕುಲಂ ಬಡಾವಣೆಯಲ್ಲಿ ತಂಗಿದ್ದರು.27-7-2025 ರ ರಾತ್ರಿ ಸುಮಾರು 11.45 ರಲ್ಲಿ ಬಾಗಿಲು ತಟ್ಟಿದ ಶಬ್ದವಾಗಿದೆ.ಫುಡ್ ಡೆಲಿವರಿ ಬಾಯ್ ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.ಫುಡ್ ಆರ್ಡರ್ ಮಾಡಿಲ್ಲವೆಂದು ಹೇಳುತ್ತಿದ್ದ ವೇಳೆ ಮಹಿಳೆಯನ್ನ ಬೆಡ್ ಮೇಲೆ ತಳ್ಳಿ ಬಾಗಿಲು ಚಿಲಕ ಹಾಕುವ ಪ್ರಯತ್ನ ಮಾಡಿದ್ದಾನೆ.ಈ ವೇಳೆ ಮಹಿಳೆ ಕಿರುಚಲು ಪ್ರಯತ್ನಿಸಿದಾಗ ಬಾಯಿಮುಚ್ಚಿದ್ದಾನೆ. ಆತನನ್ನ ತಳ್ಳಿ ಮಹಿಳೆ ಹೊರಬಂದು ಕಿರುಚಾಡಿದಾಗ ರಾಜೀವ್ ಎಂಬುವರು ಸಹಾಯಕ್ಕೆ ಬಂದಿದ್ದಾರೆ. ಅಪರಿಚಿತನನ್ನು ಮನೆಯೊಳಗೆ ತಳ್ಳಿ ಹೊರಗಿನಿಂದ ಬಾಗಿಲು ಭದ್ರಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಬರುವಷ್ಟರಲ್ಲಿ ಬಾಲ್ಕನಿಯಿಂದ ಕಿಡಿಗೇಡಿ ಪರಾರಿಯಾಗಿದ್ದಾನೆ.
ನೊಂದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





