Mysore
24
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮೈಸೂರು | ಮನೆ ಕಳ್ಳತನ, ಲಕ್ಷಾಂತರ ರೂಪಾಯಿ, ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು : ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ಮನೆಯ ಬೀಗ ಮುರಿದ ಕಳ್ಳರು ಚಿನ್ನ ಹಾಗೂ ನಗದನ್ನು ದೋಚಿಕೊಂಡು ಹೋಗಿರುವ ಘಟನೆ  ಇಲ್ಲಿನ ಇಲವಾಲ ಬಳಿಯ ನಾಗವಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೇಣುಕಾ ಎಂಬ ಮಹಿಳೆಯು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಅರಿತ ಕಳ್ಳರು ಮನೆಯ ಹಿಂಬಾಗಿಲ ಬೀಗ ಮುರಿದು 3,26,700 ರೂ ನಗದು, 276 ಗ್ರಾಂ ಚಿನ್ನ ಹಾಗೂ 1350 ಗ್ರಾಂ ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಘಟನೆಯ ಮಾಹಿತಿ ಅರಿತ ಇಲವಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Tags:
error: Content is protected !!