ಮೈಸೂರು: ಮೈಸೂರಿನ ಖ್ಯಾತ ಜನಪದ ಗಾಯಕ, ಕಲಾವಿದರಾದ ಡಾ. ಮೈಸೂರು ಗುರುರಾಜು ಅವರಿಗೆ ʼಜನಪದ ಕಂಠೀರವʼ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲಂ ಮತ್ತು ಕಲ್ಚರ್ ಅಕಾಡೆಮಿಯಲ್ಲಿ ಅಂತರಾಷ್ಟ್ರೀಯ ಜನಪದ ದಿನಾಚರಣೆ ಪ್ರಯುಕ್ತ ʼಜನಪದ ಸಿರಿ ಕನ್ನಡʼ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಜನಪದ ಸಿರಿ-2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಮೈಸೂರು ಗುರುರಾಜು ಅವರಿಗೆ ʼಜನಪದ ಕಂಠೀರವʼ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಬಾನಂದೂರು ಕೆಂಪಯ್ಯ ಅವರಿಗೆ ಜನಪದ ಜಂಗಮ ರಾಷ್ಟ್ರೀಯ ಪ್ರಶಸ್ತಿ ನೀಡಿ ನೀಡಲಾಯಿತು.
ಈ ಸಂದರ್ಭದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ. ಹಿ.ಚಿ ಬೋರಲಿಂಗಯ್ಯ, ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ವೇಮಗಲ್ ನಾರಾಯಣಸ್ವಾಮಿ, ಜನಪದ ಸಿರಿ ಕನ್ನಡ ಸಂಸ್ಥಾಪಕ ಜರಗನ ಹಳ್ಳಿ ಕಾಂತರಾಜು ಹಾಜರಿದ್ದರು.