ಮೈಸೂರು : ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ಶಾಲೆಯ ಸ್ಥಾಪಕ, ತಬಲಾ ವಾದಕ ಭೀಮಾಶಂಕರ ಬಿದನೂರ ಅವರಿಗೆ ಅವರ ಶಿಷ್ಯ ರೋಹಿತ್ ಕಳಲೆ ಅವರಿಂದ ಗುರು ಅಭಿವಂದನೆ ಕಾರ್ಯಕ್ರಮ ಆಗಸ್ಟ್ 26ರಂದು ಸಂಜೆ 5.30 ಗಂಟೆಗೆ ಇಲ್ಲಿನ ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಅಂದು ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವಿದ್ಯಾರ್ಥಿಗಳಿಂದ ತಬಲಾ ವಾದನ, ಪಂ.ರವಿಶಂಕರ್ ಮಿಶ್ರಾ ಅವರಿಂದ ಕೊಳಲು ವಾದನ, ಭೀಮಾಶಂಕರ ಬಿದನೂರ ಹಾಗೂ ಕು.ರೋಹಿತ್ ಕಳಲೆ ಅವರಿಂದ ತಬಲಾ ಜುಗಲ್ ಬಂದಿ ಕಛೇರಿ ನಡೆಯಲಿದೆ. ನಂತರ ಪಂ.ವೀರಭದ್ರಯ್ಯ ಹಿರೇಮಠ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮೃತ್ಯುಂಜಯ ಹಿರೇಮಠ ಹಾಗೂ ವಿಘ್ನೇಶ್ ಭಾಗ್ವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮ ಸರಿಯಾದ ಸಮಯಕ್ಕೆ ಶುರುವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯರು ಆಗಮಿಸಬೇಕೆಂದು ರೋಹಿತ್ ಹೆತ್ತವರಾದ ಆಶಾ ಹಾಗೂ ಭಾಸ್ಕರ್ ಕಳಲೆ ಪ್ರಕಟಣೆಯಲ್ಲಿ ಕೋರಿದ್ದಾರೆ.





